ಮುಂದಿನ ಐಪಿಎಲ್ ಗೆ ಶಿಖರ್ ಧವನ್ ಹೊಸ ತಂಡಕ್ಕೆ ಸೇರ್ಪಡೆ

ಸೋಮವಾರ, 29 ಅಕ್ಟೋಬರ್ 2018 (08:50 IST)
ನವದೆಹಲಿ: ಟೀಂ ಇಂಡಿಯಾದ ಹೊಡೆ ಬಡಿಯ ಆರಂಭಿಕ ಶಿಖರ್ ಧವನ್ ಮುಂದಿನ ಐಪಿಎಲ್ ಸೀಸನ್ ನಲ್ಲಿ ಹೊಸ ತಂಡ ಕೂಡಿಕೊಳ್ಳುವ ನಿರೀಕ್ಷೆಯಿದೆ.

ಸದ್ಯಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದಾರೆ. ಆದರೆ ಮುಂದಿನ ಋತುವಿನಲ್ಲಿ ಅವರನ್ನು ಬೇರೊಂದು ತಂಡಕ್ಕೆ ಹರಾಜು ಹಾಕಲು ಹೈದರಾಬಾದ್ ನಿರ್ಧರಿಸಿದೆ. ಇದರ ಬಗ್ಗೆ ಇತರ ತಂಡಗಳೊಂದಿಗೆ ಈಗಾಗಲೇ ಮಾತುಕತೆಯಲ್ಲಿದೆ.

ಒಂದು ಮೂಲಗಳ ಪ್ರಕಾರ ಧವನ್ ತಮ್ಮ ತವರು ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ. ದೆಹಲಿ ಅಲ್ಲದೆ, ಕಿಂಗ್ಸ್ ಇಲೆವೆನ್ ಪಂಜಾಬ್ ಕೂಡಾ ಧವನ್ ಕೊಳ್ಳಲು ಆಸಕ್ತಿ ವಹಿಸಿದೆ ಎನ್ನಲಾಗಿದೆ. ಅಂತೂ ಮುಂದಿನ ಐಪಿಎಲ್ ವೇಳೆಗೆ ಧವನ್ ಬೇರೊಂದು ತಂಡದಲ್ಲಿರುವುದು ನಿಶ್ಚಿತ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿಗೆ ಹೊಸ ಸವಾಲು ಹಾಕಿದ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್