ಶಿಖರ್ ಧವನ್ ಪತ್ನಿಯ ರಹಸ್ಯವೊಂದು ಬಯಲು!

ಶುಕ್ರವಾರ, 19 ಅಕ್ಟೋಬರ್ 2018 (08:52 IST)
ನವದೆಹಲಿ: ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ತಮ್ಮ ಪತ್ನಿ ಆಯೆಷಾರನ್ನು ಯಾವುದೇ ಕ್ರಿಕೆಟ್ ಸರಣಿಗೂ ಜತೆಯಲ್ಲೇ ಕರೆದೊಯ್ಯುತ್ತಾರೆ.

ಶಿಖರ್ ಧವನ್ ವೃತ್ತಿ ಬದುಕಿನಲ್ಲಿ ಆಯೆಷಾ ಪ್ರಭಾವ ಆ ಮಟ್ಟಿಗಿದೆ. ಗಂಡನ ಜತೆಗೆ ತಾನೂ ಫಿಟ್ ಆಗಿರಲು ಸದಾ ವರ್ಕೌಟ್ ಮಾಡುವ ಆಯೆಷಾ ತಾವು ಯಾವತ್ತೂ ತಲೆ ಮೇಲೆ ಟೋಪಿ ಧರಿಸುವುದು ಏಕೆ ಎಂದು ಕಾರಣ ಬಹಿರಂಗಪಡಿಸಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಆಯೆಷಾ ಬರೆದುಕೊಂಡಿದ್ದಾರೆ. ‘ನಾನು ಸದಾ ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತೇನೆ. ಸಮಯ ಹಾಳು ಮಾಡಲು ನನಗೆ ಇಷ್ಟವಿಲ್ಲ. ನಮ್ಮ ಮನೆಕೆಲಸಗಳು, ಮಕ್ಕಳ ಕೆಲಸ, ನನ್ನ ವ್ಯವಹಾರ ಎಲ್ಲವನ್ನೂ ನಾನೇ ಮಾಡಿಕೊಳ್ಳುತ್ತಾ ಬ್ಯುಸಿಯಾಗಿರುತ್ತೇನೆ. ಈ ನಡುವೆ ಉದ್ದ ಕೂದಲು ಬಿಟ್ಟುಕೊಂಡು ಅದನ್ನು ಬಾಚಿಕೊಳ್ಳುವುದು, ಸ್ಟೈಲ್ ಮಾಡುವಷ್ಟು ಪುರುಸೊತ್ತು ನನಗಿಲ್ಲ. ಅದಕ್ಕಾಗಿ ಸಮಯ ಹಾಳುಮಾಡಲೂ ಇಷ್ಟವಿಲ್ಲ. ಹೀಗಾಗಿ ಕೂದಲು ಬೋಳಿಸಿಕೊಂಡು ಟೋಪಿ ಧರಿಸಿಕೊಳ್ಳುತ್ತೇನೆ’ ಎಂದು ಆಯೆಷಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಹೆರಿಗೆಗೆ ಮೊದಲೇ ಸಾನಿಯಾ ಮಿರ್ಜಾಗೆ ಗಂಡು ಮಗುವಾಯ್ತೆಂದು ಗುಲ್ಲು!