ಟೀಂ ಇಂಡಿಯಾ ಕ್ರಿಕೆಟಿಗರ ಟ್ವಿಟರ್ ಖಾತೆ ಹ್ಯಾಕ್

ಸೋಮವಾರ, 24 ಸೆಪ್ಟಂಬರ್ 2018 (09:17 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ಶಿಖರ್ ಧವನ್ ಮತ್ತು ಗೌತಮ್ ಗಂಭೀರ್ ಟ್ವಿಟರ್ ಖಾತೆಗಳು ಹ್ಯಾಕ್ ಆಗಿವೆ.

ಇವರಿಬ್ಬರೂ ಸದಾ ಟ್ವಿಟರ್ ನಲ್ಲಿ ಸಕ್ರಿಯರಾಗಿರುತ್ತಾರೆ. ಆದರೆ ಇದೀಗ ತಮ್ಮ ಖಾತೆ ಹ್ಯಾಕ್ ಆಗಿದೆ. ಆದರೆ ಧವನ್ ತಮ್ಮ ಖಾತೆಯನ್ನು ಸರಿಪಡಿಸಿಕೊಂಡಿದ್ದು, ಇತ್ತೀಚೆಗೆ ನನ್ನ ಖಾತೆಯಿಂದ ನಿಮಗೆ ಸಂದೇಶ ಬಂದಿದ್ದರೆ ಅದನ್ನು ಪರಿಗಣಿಸಬೇಡಿ. ನನ್ನ ಖಾತೆ ಹ್ಯಾಕ್‍ ಆಗಿತ್ತು. ಈಗಷ್ಟೇ ಸರಿಪಡಿಸಿಕೊಂಡಿದ್ದೇನೆ ಎಂದು ಸಂದೇಶ ಬರೆದಿದ್ದಾರೆ.

ಇಂದು ಗೌತಮ್ ಗಂಭೀರ್ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯುಸಿಯಾಗಿರುವುದರಿಂದ ಅವರು ತಮ್ಮ ಖಾತೆಯನ್ನು ಇನ್ನೂ ಸರಿಪಡಿಸಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಪಾಕ್ ವಿರುದ್ಧ ಗೆದ್ದು ದಾಖಲೆ ಮಾಡಿತು ಟೀಂ ಇಂಡಿಯಾ