ಅನುಷ್ಕಾ ಶರ್ಮಾ, ಶಿಖರ್ ಧವನ್ ಪತ್ನಿ ನಡುವೆ ಜಗಳಕ್ಕೆ ಟೀಂ ಇಂಡಿಯಾದಲ್ಲಿ ಬಿರುಕು?

ಶನಿವಾರ, 6 ಅಕ್ಟೋಬರ್ 2018 (09:51 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಶಿಖರ್ ಧವನ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗದೇ ಇರುವುದಕ್ಕೆ ತಂಡದೊಳಗೆ ನಡೆದಿದ್ದ ಪತ್ನಿಯರ ಜಗಳವೇ ಕಾರಣವೇ? ಹೀಗೊಂದು ಅನುಮಾನ ಶುರುವಾಗಿದೆ.

ಇಂಗ್ಲೆಂಡ್ ಸರಣಿಯ ಸಂದರ್ಭದಲ್ಲಿ ಶಿಖರ್ ಧವನ್ ಪತ್ನಿ ಅಯೇಷಾ ಮತ್ತು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ತಂಡದ ಆಯ್ಕೆ ವಿಚಾರದಲ್ಲಿ ಅನುಷ್ಕಾ ಶರ್ಮಾ ಮೂಗು ತೂರಿಸುತ್ತಿದ್ದುದಕ್ಕೆ ಇವರಿಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.

ಇದೇ ವಿಚಾರದಲ್ಲಿ ಇಬ್ಬರು ಆಟಗಾರರ ನಡುವೆ ವೈಮನಸ್ಯ ಶುರುವಾಗಿದ್ದೇ ಧವನ್ ಗೆ ಕೊಕ್ ನೀಡಿದ್ದಕ್ಕೆ ಕಾರಣ ಎಂಬ ಗುಲ್ಲು ಹಬ್ಬಿದೆ. ತಂಡದ ಮೀಟಿಂಗ್ ಸಂದರ್ಭದಲ್ಲಿ ಕೊಹ್ಲಿ ಜತೆ ಅನುಷ್ಕಾ ಕೂಡಾ ಬಂದು ಸಲಹೆ ಕೊಡುತ್ತಿದ್ದರು ಎನ್ನಲಾಗಿದೆ. ಇದೀಗ ಟೀಂ ಇಂಡಿಯಾದಲ್ಲಿ ಬಿರುಕಿಗೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ರಾಜ್ ಕೋಟ್ ಮೈದಾನದಲ್ಲಿ ಆಡುವಾಗ ಚೇತೇಶ್ವರ ಪೂಜಾರ ಪ್ಯಾಂಟ್ ಜೇಬಿನಲ್ಲಿ ಏನಿತ್ತು ಗೊತ್ತಾ?