ಯಶ್ ಬಾಡಿಗೆ ಮನೆ ವಿವಾದ; ಹೈಕೋರ್ಟ್ ನಲ್ಲೂ ನಟ ಯಶ್ ಗೆ ಹಿನ್ನಡೆ

Webdunia
ಗುರುವಾರ, 6 ಸೆಪ್ಟಂಬರ್ 2018 (07:04 IST)
ಬೆಂಗಳೂರು : ನಟ ಯಶ್ ಅವರ ಬಾಡಿಗೆ ಮನೆ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ ತಾಯಿಗೆ ಹೈಕೋರ್ಟ್ ನಲ್ಲಿಯೂ ಬಾರೀ ಹಿನ್ನಲೆಯಾಗಿದೆ.


ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಮುನಿಪ್ರಸಾದ್ ಹಾಗೂ ಡಾ. ವನಜಾ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಯಶ್​​​ ಕುಟುಂಬ ವಾಸವಾಗಿದೆ. ಬಾಡಿಗೆ ಹಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಹಾಗೂ ಯಶ್ ನಡುವೆ ಮನಸ್ತಾಪವಾಗಿತ್ತು. ಅದೃಷ್ಟದ ಮನೆ ಎಂಬ ಕಾರಣಕ್ಕೆ ಯಶ್ ಮನೆ ಖಾಲಿ ಮಾಡಲು ನಿರಾಕರಿಸಿದ್ದರು. ಈ ವಿವಾದ ಕೋರ್ಟ್​ ಮೆಟ್ಟಿಲೇರಿದ್ದು ಯಶ್ ಅವರ ವಿರುದ್ಧವಾಗಿ ಕೋರ್ಟ್ ತೀರ್ಪು ನೀಡಿತ್ತು.


ನಂತರ ಯಶ್ ತಾಯಿ ಪುಷ್ಪಾ ಸೆಷನ್ಸ್ ಕೋರ್ಟ್​ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್​ ವಿಭಾಗೀಯ ಪೀಠ ಸೆಷನ್ಸ್ ಕೋರ್ಟ್ ಆದೇಶ ಎತ್ತಿಹಿಡಿದಿದ್ದು, ಕೂಡಲೇ ಬಾಕಿ 23 ಲಕ್ಷ ರೂ. ಹಣ ನೀಡುವಂತೆ ಸೂಚಿಸಿದೆ. ಹಣ ನೀಡಿದರೆ ಮಾರ್ಚ್ 31ವರೆಗೂ ಆ ಮನೆಯಲ್ಲಿ ಇರಬಹುದು. ಇಲ್ಲವಾದರೆ ಡಿಸೆಂಬರ್​​​​​​ಗೆ ಮನೆ ಖಾಲಿ ಮಾಡುವಂತೆ ನ್ಯಾ. ಬೋಪಣ್ಣ, ನ್ಯಾ. ಶ್ರೀನಿವಾಸ್ ಹರಿಕುಮಾರ್ ಅವರಿದ್ದ ವಿಭಾಗೀಯ ಪೀಠ ಆದೇಶ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಪಾಕಿಸ್ತಾನದಲ್ಲೂ ಬಿಡುಗಡೆಯಾಗಲಿದೆ 'ಪ್ರೇಮ್ ರತನ್ ಧನ್ ಪಾಯೋ'

ಅಹಹಾ… ದೀಪಿಕಾ ಚುಂಬನ!.. ಬಾಯಿ ಚಪ್ಪರಿಸಿಕೊಂಡ ರಣವೀರ್ ಸಿಂಗ್

ಲೂಸ್ ಮಾದ ಯೋಗಿ ಅಣ್ಣನ ಮದುವೆ

ಯುದ್ಧಕ್ಕೆ ನಾವೂ ರೆಡಿ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್

ಯಡಿಯೂರಪ್ಪ ಬಾಯಿ ದೆವ್ವದ ಬಾಯಿ ಇದ್ದಂತೆ ಎಂದ ಸಚಿವ

ಸಂಬಂಧಿಸಿದ ಸುದ್ದಿ

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ

ಮುಂದಿನ ಸುದ್ದಿ