Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ ನಟ ರಕ್ಷಿತ್ ಶೆಟ್ಟಿ

ಸಾಮಾಜಿಕ ಜಾಲತಾಣಕ್ಕೆ ಗುಡ್ ಬೈ ಹೇಳಿದ ನಟ ರಕ್ಷಿತ್ ಶೆಟ್ಟಿ
ಬೆಂಗಳೂರು , ಬುಧವಾರ, 5 ಸೆಪ್ಟಂಬರ್ 2018 (10:21 IST)
ಬೆಂಗಳೂರು : ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅವರು ಇದೀಗ ಸಾಮಾಜಿಕ ಜಾಲ ತಾಣಕ್ಕೆ ಗುಡ್ ಬೈ ಹೇಳುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಬೇಸರವನ್ನುಂಟುಮಾಡಿದ್ದಾರೆ.

ಈ ವಿಚಾರವನ್ನು ರಕ್ಷಿತ್ ಭಾನುವಾರ ತನ್ನ ಇನ್ ಸ್ಟಾ ಗ್ರಾಂನಲ್ಲಿ ಬಹಿರಂಗಗೊಳಿಸಿದ್ದು, 'ನಾನು ಸಾಮಾಜಿಕ ಜಾಲತಾಣದಿಂದ ಹೊರಗಿರಲು ಬಯಸುತ್ತಿದ್ದೇನೆ. ನೀವು ನನಗೆ ಅಪಾರ ಪ್ರೀತಿ ತೋರಿಸಿದ್ದೀರಿ. ಅದಕ್ಕೆ ನನ್ನ ಧನ್ಯವಾದ. ಲವ್ ಯು ಆಲ್' ಎಂದಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಇನ್ ಸ್ಟಾ ಗ್ರಾಂ ಖಾತೆಯೊಂದಿಗೆ ಟ್ವಿಟರ್ ಖಾತೆಯನ್ನೂ ಡಿ ಆಯಕ್ಟಿವೇಟ್ ಮಾಡಿದ್ದಾರೆ. ಆದರೆ ಇದಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

 

ಅಷ್ಟೇ ಅಲ್ಲದೇ ಸದಾ ಟ್ವಿಟರ್ ನಲ್ಲಿ ಸ್ಟೇಟಸ್ ಹಾಕುತ್ತಲೇ ಇರುವ ರಕ್ಷಿತ್ ಶೆಟ್ಟಿ ಕಳೆದ 20 ದಿನಗಳಿಂದ ಯಾವ ಪೋಸ್ಟನ್ನೂ ಮಾಡಿರಲಿಲ್ಲವಂತೆ. ಫೇಸ್​ಬುಕ್​ನಲ್ಲಿಯೂ ಇತ್ತೀಚೆಗೆ ಅವರು ಕಾಣಿಸಿಕೊಂಡಿರಲಿಲ್ಲವಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನ ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು