Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಡಿಸ್ಕೋಥೆಕ್ ವೊಂದರಲ್ಲಿ ನಡೆಯುತ್ತಿತ್ತು ಇಂತಹ ನೀಚ ಕೃತ್ಯ

ಬೆಂಗಳೂರಿನ ಡಿಸ್ಕೋಥೆಕ್ ವೊಂದರಲ್ಲಿ ನಡೆಯುತ್ತಿತ್ತು ಇಂತಹ ನೀಚ ಕೃತ್ಯ
ಬೆಂಗಳೂರು , ಮಂಗಳವಾರ, 12 ಫೆಬ್ರವರಿ 2019 (07:17 IST)
ಬೆಂಗಳೂರು : ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು  ಅಶ್ಲೀಲ ನೃತ್ಯ ಮಾಡಿಸಿ ಅಕ್ರಮವಾಗಿ ಡಿಸ್ಕೋಥೆಕ್ ನಡೆಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಸುದೇಶ್ ಈ ದಂಧೆ ನಡೆಸುತ್ತಿದ್ದ ಆರೋಪಿ. ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ಟ್ ಆಫ್ ಪೆವಿಲಿಯನ್ ಅಂಡ್ ರೆಸ್ಟೋರೆಂಟ್​ನಲ್ಲಿ ಡಿಸ್ಕೋಥೆಕ್ ನಡೆಸುತ್ತಿದ್ದ ಈತ ಪರವಾನಗಿ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಅವರಿಂದ  ಅಶ್ಲೀಲ ನೃತ್ಯ ಮಾಡಿಸುತ್ತಿದ್ದ. ಅಷ್ಟೇ ಅಲ್ಲದೇ ಡಿಸ್ಕೋಥೆಕ್​ಗೆ ಬರುವವರಿಗೆ ಕಪಲ್ ಎಂಟ್ರಿ ಹೆಸರಿನಲ್ಲಿ ಹುಡುಗಿಯರ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.


ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಡಿಸ್ಕೋಥೆಕ್​​ನಲ್ಲಿದ್ದ 83 ಜನರನ್ನು ವಶಕ್ಕೆ ಪಡೆದು, 28 ಮಹಿಳೆಯರನ್ನು ರಕ್ಷಿಸಲಾಗಿದೆ. ದಾಳಿಯಲ್ಲಿ 2,41,550 ರೂಪಾಯಿ ಜಪ್ತಿ ಮಾಡಿಕೊಳ್ಳಲಾಗಿದೆ ೆಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತುಂಡುಡುಗೆ ಧರಿಸಿದ ಮಹಿಳಾ ಸಂಸದೆಗೆ ವ್ಯಕ್ತಿಯಿಂದ ಅತ್ಯಾಚಾರ ಎಸಗುವ‌ ಬೆದರಿಕೆ