ಹಣದಾಸೆಗೆ ಅಪ್ರಾಪ್ತ ಮಗಳಿಗೆ ಮದುವೆ ಮಾಡಲು ಮುಂದಾದ ತಾಯಿ

ಸೋಮವಾರ, 11 ಫೆಬ್ರವರಿ 2019 (14:56 IST)
ಬೆಂಗಳೂರು : ಹಣದಾಸೆಗೆ ನೀಚ ತಾಯಿಯೊಬ್ಬಳು ತನ್ನ ಅಪ್ರಾಪ್ತ ಮಗಳನ್ನು ಈಗಾಗಲೇ ಮದುವೆಯಾದ ಯುವಕನಿಗೆ ಕೊಟ್ಟು ಮದುವೆ ಮಾಡಲು ಮುಂದಾದ ಘಟನೆ ನ್ಯೂ ಬಾಗಲೂರು ಲೇಔಟ್‍ನಲ್ಲಿರುವ ದುರ್ಗದೇವಿ ದೇವಸ್ಥಾನದಲ್ಲಿ ನಡೆದಿದೆ.


ನಾಗಲಕ್ಷ್ಮಿ ಇಂತಹ ನೀಚ ಕೆಲಸಕ್ಕೆ ಮುಂದಾದ ಮಹಾತಾಯಿ. ಈಕೆಯ ಮಗಳು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮದುವೆ ಗಂಡಿನ ಬಳಿ ಹಣ ಪಡೆದುಕೊಂಡ ತಾಯಿ ಈಗಾಗಲೇ ಮದುವೆ ಆಗಿದ್ದವನ ಜೊತೆ ತನ್ನ ಮಗಳ ಮದುವೆ ಮಾಡಲು ಮುಂದಾಗಿದ್ದಳು.


ಇದಕ್ಕೆ ಆಕೆಯ ಸಂಬಂಧಿಕರು ವಿರೋದ ವ್ಯಕ್ತಪಡಿಸಿ ಕೆಲ ಮಹಿಳಾ ಸಂಘಟನೆಯ ಸಹಾಯದಿಂದ ಮದುವೆ ನಿಲ್ಲಿಸಿ ಬಾಣಸವಾಡಿಯ ಪೊಲೀಸ್ ಠಾಣೆಯಲ್ಲಿ ತಾಯಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮದುವೆಗೆ ವಿರೋಧವಾಗುತ್ತಿದ್ದಂತೆ ತಾಯಿ ತನ್ನ ಮಗಳೊಂದಿಗೆ ಪರಾರಿಯಾಗಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING