ತುಂಡುಡುಗೆ ಧರಿಸಿದ ಮಹಿಳಾ ಸಂಸದೆಗೆ ವ್ಯಕ್ತಿಯಿಂದ ಅತ್ಯಾಚಾರ ಎಸಗುವ‌ ಬೆದರಿಕೆ

ಮಂಗಳವಾರ, 12 ಫೆಬ್ರವರಿ 2019 (07:14 IST)
ಬ್ರೆಜಿಲ್ : ಮಹಿಳಾ ಸಂಸದೆಯೊಬ್ಬರು ತುಂಡುಡುಗೆ ಧರಿಸಿದ್ದಕ್ಕೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗುವ‌ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.


ಸಂತಾ ಕೆಟರಿನಾ ಕ್ಷೇತ್ರದಲ್ಲಿ 50 ಸಾವಿರ ಮತಗಳ‌ ಅಂತರದಿಂದ ಗೆಲುವು ಸಾಧಿಸಿದ್ದ ಬ್ರೆಜಿಲ್‌ ನ ಸಂಸದೆ ಅನಾ ಪೌಲಾ ಡಿ‌ ಸಿಲ್ವಾ ಅವರು ಸಂಸತ್‌ ನಲ್ಲಿ ಭಾಗವಹಿಸಿದಾಗ ಔಟ್‌ ಫಿಟ್ ಇರುವ‌ ಕೆಂಪು ಬಣ್ಣದ ಬಟ್ಟೆ ಧರಿಸಿದ್ದರು.


ಸಿಲ್ವಾ ಅವರು ಧರಿಸಿದ್ದ‌ ಉಡುಪಿಗೆ ಆಕ್ಷೇಪ ವ್ಯಕ್ತವಾಗಿದ್ದು ವ್ಯಕ್ತಿಯೊಬ್ಬ ಅತ್ಯಾಚಾರ ಎಸಗುವ‌ ಬೆದರಿಕೆ ಹಾಕಿದ್ದಾನೆ. ಸಿಲ್ವಾಗೆ ಈ ರೀತಿಯ ಬೆದರಿಕೆ ಬಂದಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ‌ ಸಿಲ್ವಾ, ಈ ರೀತಿ ಹೇಳಿಕೆಗಳಿಂದ ನಿಜಕ್ಕೂ ಘಾಸಿಯಾಗಿದ್ದು, ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೇ ಕಾರ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING