Select Your Language

Notifications

webdunia
webdunia
webdunia
webdunia

ಟ್ರೋಲ್ ಮಾಡಿದವರಿಗೆ ಸಖತ್ ಆಗಿ ಟಾಂಗ್ ಕೊಟ್ಟ ಸಂಯುಕ್ತ

ಟ್ರೋಲ್ ಮಾಡಿದವರಿಗೆ ಸಖತ್ ಆಗಿ ಟಾಂಗ್ ಕೊಟ್ಟ ಸಂಯುಕ್ತ
ಬೆಂಗಳೂರು , ಮಂಗಳವಾರ, 6 ಮಾರ್ಚ್ 2018 (07:54 IST)
ಬೆಂಗಳೂರು: ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಎಲ್ಲಿ ಹೋದರೂ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ. ಸಾಕಷ್ಟು ಜನ ಇವರನ್ನು ಟ್ರೋಲ್ ಮಾಡುತ್ತಿರುತ್ತಾರೆ. ಆದರೆ ನಟಿ ಸಂಯುಕ್ತ ತನ್ನನ್ನು ಟ್ರೋಲ್ ಮಾಡುವವರಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.


ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಂಯುಕ್ತರಿಗೆ ಟ್ರೋಲ್‍ಗಳ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಂಯುಕ್ತ, ನಾನು ಏನು ಮಾಡಬೇಕು ಎನ್ನುವುದು ನನಗಿಂತ ಚೆನ್ನಾಗಿ ನಿಮಗೆ ಗೊತ್ತಾಗುತ್ತೆ, ಅದು ಹೇಗೆ? ಟ್ರೋಲ್ ಮಾಡಲು ನಿಮಗೆ ಟೈಮ್ ಎಲ್ಲಿ ಸಿಗುತ್ತೆ? ಎಂದು ಟ್ರೋಲ್ ಮಾಡುವವರಿಗೆ ಪ್ರಶ್ನೆ ಹಾಕಿದ್ದಾರೆ.


ನನ್ನ ಫೋಟೋಗನ್ನು ಟ್ರೋಲ್ ಮಾಡುವುದರಿಂದ ನಿಮಗೆ ಸಂತೋಷವಾಗುತ್ತದೆ ಎನ್ನುವುದಾದರೆ ನನಗೂ ಸಂತೋಷವಿದೆ. ನಾನು ಒಬ್ಬ ನಟಿಯಾಗಿ ನಿಮ್ಮ ಮನರಂಜಿಸುವುದಷ್ಟೇ ನನ್ನ ಕರ್ತವ್ಯ ಎಂದು ಸಂಯುಕ್ತ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಸಹೋದರಿಯರ ಪರವಾಗಿ ನಿಂತ ಅಂಶುಲಾ ಕಪೂರ್..!!