Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್ ಮಡಿಲಿಗೆ 2 ಗಂಡು ಮಕ್ಕಳ ಸೇರ್ಪಡೆ!

ಸನ್ನಿ ಲಿಯೋನ್ ಮಡಿಲಿಗೆ 2 ಗಂಡು ಮಕ್ಕಳ ಸೇರ್ಪಡೆ!

ಅತಿಥಾ

ಬೆಂಗಳೂರು , ಸೋಮವಾರ, 5 ಮಾರ್ಚ್ 2018 (17:25 IST)
ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಹಾಗೂ ಅವರ ಪತಿ ಡೇನಿಯಲ್‌ ವೆಬರ್‌ ಬಾಳಿಗೆ ಇಬ್ಬರು ಸದಸ್ಯರಿಬ್ಬರು ಆಗಮಿಸಿದ್ದು ಅವರ ಸಂತೋಷ ದುಪ್ಪಟ್ಟಾಗಿದೆ. ಸನ್ನಿ ಲಿಯೋನ್ ಪತಿ ಡೇನಿಯಲ್‌ ವೆಬರ್ ಕಳೆದ ವರ್ಷ ಜೂನ್‌‌ನಲ್ಲಿ ನಿಶಾ ಕೌರ್ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದರು. ಇದೀಗ ಅವಳಿ ಗಂಡು ಮಕ್ಕಳು ಅವರ ಮಡಿಲು ತುಂಬಿದ್ದಾರೆ.
ಬಾಡಿಗೆ ತಾಯಿ ಮೂಲಕ ಸನ್ನಿ ಮಗು ಪಡೆದಿದ್ದು, ನಮ್ಮ ಕುಟುಂಬ ಪರಿ ಪೂರ್ಣವಾಗಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ. ಅಶೆರ್‌ ಹಾಗೂ ನೋಹ್ ಎಂದು ಇಬ್ಬರು ಮಕ್ಕಳಿಗೆ ನಾಮಕರಣ ಕೂಡ ಮಾಡಲಾಗಿದೆ. 
 
ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸನ್ನಿ ಲಿಯೋನ್, 'ಇದು ದೇವರ ನಿಶ್ಚಯ, ನಮ್ಮ ಕುಟುಂಬ ಹೀಗಾಗುತ್ತದೆ ಎಂದು ಭಾವಿಸಿರಲಿಲ್ಲ. ನಮ್ಮ ಜೀವನದಲ್ಲಿ 3 ವಿಸ್ಮಯ ನಡೆದಂತಿದೆ, ನನ್ನ ಪತಿಯ ಆಪೇಕ್ಷೆಯಂತೆ ಮೂವರು ಮಕ್ಕಳನ್ನು ಹೊಂದಿದ್ದೇವೆ, ಇದೀಗ ನಮ್ಮ ಕುಟುಂಬ ದೊಡ್ಡದಾಗಿದೆ.' ಎಂದು ಸನ್ನಿ ಟ್ವೀಟ್‌ ಮಾಡಿದ್ದಾರೆ.
 
ಸನ್ನಿ ತನ್ನ ಇನ್‌ಸ್ಟಾಗ್ರಾಂ ಮತ್ತು ಟ್ವೀಟರ್ ಖಾತೆಯಲ್ಲಿ ಒಂದು ಕುಟುಂಬದ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ, ಈ ಪೋಟೋದಲ್ಲಿ ನಿಶಾ ಜೊತೆಗೆ ಸನ್ನಿ ಲಿಯೋನ್ ಹಾಗೂ ಡೇವಿಡ್ ವೆಬರ್ ಎರಡು ಮಕ್ಕಳನ್ನು ಹಿಡಿದು ಕುಳಿತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಕರ್‌ 2018 ಗೆದ್ದ 'ದಿ ಶೇಪ್‌ ಆಫ್‌ ವಾಟರ್‌' ಚಿತ್ರ