Select Your Language

Notifications

webdunia
webdunia
webdunia
webdunia

ತೆಲುಗಿನಲ್ಲಿ ಕನ್ನಡ ಹೀರೋಗೆ ರಶ್ಮಿಕಾ ಮಂದಣ್ಣ ಹೀರೋಯಿನ್

ತೆಲುಗಿನಲ್ಲಿ ಕನ್ನಡ ಹೀರೋಗೆ ರಶ್ಮಿಕಾ ಮಂದಣ್ಣ ಹೀರೋಯಿನ್
ಹೈದರಾಬಾದ್ , ಗುರುವಾರ, 7 ಡಿಸೆಂಬರ್ 2023 (09:01 IST)
ಹೈದರಾಬಾದ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅನಿಮಲ್ ಸಕ್ಸಸ್ ನಡುವೆಯೇ ಮತ್ತೊಂದು ಸಿನಿಮಾ ಸುದ್ದಿ ಕೊಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಇದಕ್ಕೆ ‘ಗರ್ಲ್ ಫ್ರೆಂಡ್’ ಎಂದು ಟೈಟಲ್ ಇಡಲಾಗಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ರಶ್ಮಿಕಾಗೆ ಕನ್ನಡ ಮೂಲದ ನಟನೇ ನಾಯಕನಾಗುತ್ತಿದ್ದಾರೆ.

ಗರ್ಲ್ ಫ್ರೆಂಡ್ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ರಶ್ಮಿಕಾ ಜೊತೆಗೆ ‘ದಿಯಾ’ ಖ್ಯಾತಿಯ ಕನ್ನಡ ನಟ ದೀಕ್ಷಿತ್ ಶೆಟ್ಟಿ ನಾಯಕರಾಗಲಿದ್ದಾರೆ. ರಾಹುಲ್ ರವೀಂದ್ರನ್ ನಿರ್ದೇಶನದ ಸಿನಿಮಾ ಇದಾಗಿದ್ದು, ಅಲ್ಲು ಅರವಿಂದ್ ನಿರ್ಮಾಣ ಮಾಡಲಿದ್ದಾರೆ.

ರಶ್ಮಿಕಾರಂತೇ ಕನ್ನಡದಲ್ಲಿ ಮೊದಲು ನಟಿಸಿದ್ದ ದೀಕ್ಷಿತ್ ಇದೀಗ ತೆಲುಗಿನಲ್ಲಿ ಹೆಸರು ಮಾಡುತ್ತಿದ್ದಾರೆ. ಕನ್ನಡದಲ್ಲಿ ಸಿಗದ ಅವಕಾಶ ದೀಕ್ಷಿತ್ ಗೆ ತೆಲುಗಿನಲ್ಲಿ ಸಿಗುತ್ತಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

500 ಕೋಟಿ ಕ್ಲಬ್ ಸೇರಿದ ಅನಿಮಲ್ ಸಿನಿಮಾ