Select Your Language

Notifications

webdunia
webdunia
webdunia
webdunia

500 ಕೋಟಿ ಕ್ಲಬ್ ಸೇರಿದ ಅನಿಮಲ್ ಸಿನಿಮಾ

500 ಕೋಟಿ ಕ್ಲಬ್ ಸೇರಿದ ಅನಿಮಲ್ ಸಿನಿಮಾ
ಮುಂಬೈ , ಗುರುವಾರ, 7 ಡಿಸೆಂಬರ್ 2023 (08:40 IST)
ಮುಂಬೈ: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಅನಿಮಲ್ ಸಿನಿಮಾ ಈಗ 500 ಕೋಟಿ ರೂ. ಗಳಿಕೆ ಮಾಡಿದೆ.

ಭಾರತದ ಮಾರುಕಟ್ಟೆಯಲ್ಲಿ 500 ಕೋಟಿ ರೂ. ಗಳಿಕೆ ಮಾಡಿದ ಹೆಗ್ಗಳಿಕೆಗೆ ಅನಿಮಲ್ ಸಿನಿಮಾ ಪಾತ್ರವಾಗಿದೆ. ಮೊದಲ ದಿನವೇ ಸಿನಿಮಾ 61 ಕೋಟಿ ರೂ. ಗಳಿಕೆ ಮಾಡಿತ್ತು.

ಬಳಿಕ ವೀಕೆಂಡ್ ನಲ್ಲಿ ಅನಿಮಲ್ ಸಿನಿಮಾ ಗಳಿಕೆ ಹೆಚ್ಚಾಗಿದೆ. ಮೂರೇ ದಿನಕ್ಕೆ 200 ಕೋಟಿ ಗಳಿಕೆ ಮಾಡಿದ್ದ ಅನಿಮಲ್ ಇದೀಗ 500 ಕೋಟಿ ಗಳಿಸಿದ ಖ್ಯಾತಿಗೆ ಪಾತ್ರವಾಗಿದೆ. ರಣಬೀರ್ ಕಪೂರ್ ಅವರ ಭರ್ಜರಿ ಆಕ್ಷನ್, ರಶ್ಮಿಕಾ ಮಂದಣ್ಣ ಹಾಟ್ ಅವತಾರ ಪ್ರೇಕ್ಷಕರ ಗಮನ ಸೆಳೆದಿತ್ತು.

ಈ ಮೂಲಕ ಜವಾನ್, ಪಠಾಣ್ ಬಳಿಕ ಮತ್ತೊಂದು ಬಾಲಿವುಡ್ ಸಿನಿಮಾ 500 ಕೋಟಿ ರೂ. ಗಳಿಕೆ ಮಾಡಿದಂತಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ಎರಡನೇ ಪಾರ್ಟ್ ನಿರ್ಮಾಣದ ಬಗ್ಗೆಯೂ ಚಿಂತನೆ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲ್ಕಿ ಬ್ಯೂಟಿ ತಮನ್ನ ಭಾಟಿಯಾಗೆ ಹರ್ಷ ತಂದ ಹೊಸ ಇಮೇಜ್