Select Your Language

Notifications

webdunia
webdunia
webdunia
webdunia

ನಕಲಿ ರಾಜಕೀಯ ಜಾಹೀರಾತು: ಕಾಂಗ್ರೆಸ್ ವಿರುದ್ದ ದೂರು ಕೊಟ್ಟ ನಟ ಅಮೀರ್‌ ಖಾನ್

ನಕಲಿ ರಾಜಕೀಯ ಜಾಹೀರಾತು: ಕಾಂಗ್ರೆಸ್ ವಿರುದ್ದ ದೂರು ಕೊಟ್ಟ ನಟ ಅಮೀರ್‌ ಖಾನ್

Sampriya

ನವದೆಹಲಿ , ಮಂಗಳವಾರ, 16 ಏಪ್ರಿಲ್ 2024 (17:24 IST)
Photo Courtesy X
ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರು ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಾಲಿವುಡ್ ನಟ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ನಟ ದೂರನ್ನು ನೀಡಿದ್ದಾರೆ.

ಈಚೆಗೆ ಅಮೀರ್ ಖಾನ್ ಅವರು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸಿ ಮಾಡಿರುವ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಮೂಲಕ  ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಅಮೀರ್ ಖಾನ್ ಮಾತನಾಡಿರುವಂತೆ ಕೃತಕ ಬುದ್ಧಿಮತ್ತೆ ಬಳಸಿ ಡೀಪ್‌ಫೇಕ್ ವಿಡಿಯೊ ಜನರೇಟ್ ಮಾಡಲಾಗಿದೆ.

ಅಂತರ್ಜಾಲದಲ್ಲಿ ಹರಿದಾಡುತ್ತಿರುವ ನಕಲಿ ವಿಡಿಯೋದಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ.ಗಳ ಭರವಸೆ ನೀಡಿದ್ದಕ್ಕಾಗಿ ಆಮಿರ್ ಪ್ರಧಾನಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ತೋರಿಸಲಾಗಿದೆ.

ಈ ಬಗ್ಗೆ ಅವರ ವಕ್ತಾರ ಪ್ರತಿಕ್ರಿಯಿಸಿ, ನಟ ಅಮೀರ್ ಖಾನ್ ಅವರು ತಮ್ಮ 35 ವರ್ಷಗಳ ವೃತ್ತಿ ಜೀವನದಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡಿಲ್ಲ. ಜತೆಗೆ, ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಖಾನ್ ಶ್ರಮಿಸಿದ್ದಾರೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣುವರ್ಧನ್ ನಿಧನದ ನಂತ್ರ ದ್ವಾರಕೀಶ್ ಕುಗ್ಗಿ ಹೋಗಿದ್ದರು: ನಟ ಸುಂದರರಾಜ್