Select Your Language

Notifications

webdunia
webdunia
webdunia
webdunia

ಮಧುಮೇಹಿಗಳು ತಿನ್ನುವ ಅನ್ನವನ್ನು ಈ ರೀತಿಯಾಗಿ ತಯಾರಿಸಿ

ಮಧುಮೇಹಿಗಳು ತಿನ್ನುವ ಅನ್ನವನ್ನು ಈ ರೀತಿಯಾಗಿ ತಯಾರಿಸಿ
ಬೆಂಗಳೂರು , ಮಂಗಳವಾರ, 18 ಸೆಪ್ಟಂಬರ್ 2018 (10:54 IST)
ಬೆಂಗಳೂರು : ಮಧುಮೇಹಿಗಳಿಗೆ ಅನ್ನ ತಿಂದರೆ ತೊಂದರೆಯಾಗುತ್ತದೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತದೆ. ಆದರೆ ಆ ಅನ್ನವನ್ನು ಹೇಗೆ ತಯಾರಿಸಬೇಕು, ಎಷ್ಟು ಹೊತ್ತು ಬೇಯಿಸಬೇಕು? ಕುಕ್ಕರ್ ನಲ್ಲಿ ಬೇಯಿಸಬೇಕೇ? ಬೇಯಿಸಬಾರದೇ? ಎಂಬಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.


ಮಧುಮೇಹಿರೋಗಿಗಳಿಗೆ ಕುಕ್ಕರ್ ನಲ್ಲಿ ಅನ್ನವನ್ನು ಬೇಯಿಸಬಾರದು. ಅದಕ್ಕೆ ಬದಲಾಗಿ ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಪಾರಂಪರಿಕ ವಿಧಾನದಿಂದ ತಯಾರಿಸುತ್ತಿದ್ದ ಅನ್ನ ಬಹಳ ಉತ್ತಮ. ಅನ್ನವನ್ನು ಮಾಡಲು ಉಪಯೋಗಿಸುವ ಅಕ್ಕಿಯಲ್ಲಿ ನೀರಿನಲ್ಲಿ 15-20 ನಿಮಿಷ ನೆನೆಯಲು ಇಡಬೇಕು. ಒಲೆಯ ಮೇಲೆ ಅನ್ನ ಮಾಡಲು ಬೇಕಾದ ನೀರನ್ನು ಕಾಯಲು ಇಡಬೇಕು. ಈ ನೀರಿನ ಪ್ರಮಾಣ ಅಕ್ಕಿಯ ಪ್ರಮಾಣದ 8ರಷ್ಟು ಹೆಚ್ಚು ಇರಬೇಕು. ನೀರು ಚೆನ್ನಾಗಿ ಕಾಯ್ದು ಕುದಿಯಲು ಪ್ರಾರಂಭಿಸಿದಾಗ, ನೆನೆಯಲು ಇಟ್ಟಿರುವ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನ್ನೇಲ್ಲಾ ಬಸಿದು, ಕುದಿಯುತ್ತಿರುವ  ನೀರಿನಲ್ಲಿ ಹಾಕಿ, ಮಧ್ಯಮವಾದ ಉರಿಯಿಂದ ಬೇಯಿಸಬೇಕು.


ಬೇಯುವಾಗ ಪಾತ್ರೆಯ ಬಾಯನ್ನು ಮುಚ್ಚುವುದು ಹಾಗೂ ಅಕ್ಕಿ ತಳಕಟ್ಟದ ಹಾಗೆ ಆಗಾಗ ದೌಟಿನಿಂದ ತಿರುವುತ್ತಿರಬೇಕು. ಅಕ್ಕಿ ಹದವಾಗಿ ಬೆಂದು ಮೆತ್ತನಾದಾಗ ಅದರಲ್ಲಿರುವ ಗಂಜಿ(ನೀರನ್ನು)ಯನ್ನು ಬಸಿದು ಬಾಯಿಯನ್ನು ಮುಚ್ಚಿ ಸ್ವಲ್ಪ ಹೊತ್ತು ಸಣ್ಣ ಉರಿಯಿಂದ ಬೇಯಿಸಬೇಕು. ಇದರಿಂದ ಅನ್ನ ಚೆನ್ನಾಗಿ ಅರಳಿ, ಮುದ್ದೆಯಾಗದೆ, ಹುಡಿ ಹುಡಿಯಾಗಿ ಸಿದ್ಧವಾಗುತ್ತದೆ. ಈ ಅನ್ನವನ್ನು ಮಧುಮೇಹ ರೋಗಿಗಳು ತಮ್ಮ ಪ್ರಮುಖ ಆಹಾರವನ್ನಾಗಿ ಊಟ ಮಾಡಬಹುದು. ಈ ರೀತಿ ಪಾರಂಪರಿಕ ವಿಧಾನದಿಂದ ತಯಾರಾಗದ ಅನ್ನದಲ್ಲಿ ಶರ್ಕರ ಪಿಷ್ಠ ಅಂಶವು ಕಡಿಮೆ ಇದ್ದು ಮಧುಮೇಹ ರೋಗಿಗಳಿಗೆ ಪಥ್ಯ ವಾಗಿರುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚು ಮಾಡಲು ಈ ಟ್ರಿಕ್ ಬಳಸಿದರೆ ಸಾಕು!