Select Your Language

Notifications

webdunia
webdunia
webdunia
webdunia

ಒಣದ್ರಾಕ್ಷಿ ತಿನ್ನುವುದರಿಂದ ನಿಮ್ಮ ಆರೋಗ್ಯ ಹೇಗಾಗುತ್ತೆ ಗೊತ್ತಾ?

ಒಣದ್ರಾಕ್ಷಿ ತಿನ್ನುವುದರಿಂದ ನಿಮ್ಮ ಆರೋಗ್ಯ ಹೇಗಾಗುತ್ತೆ ಗೊತ್ತಾ?

ಅತಿಥಾ

ಬೆಂಗಳೂರು , ಗುರುವಾರ, 4 ಜನವರಿ 2018 (15:51 IST)
ಒಣದ್ರಾಕ್ಷಿ ಹಲವು ಪೋಷಕಾಂಶಗಳ ಆಗರವಾಗಿದೆ. ಒಣಫಲಗಳ ಪಟ್ಟಿಯಲ್ಲಿ ಒಣದ್ರಾಕ್ಷಿಯೂ ಒಂದು. ಆದರೆ ಬಾದಾಮಿ, ಅಕ್ರೋಟು ಮೊದಲಾದ ದುಬಾರಿ ಫಲಗಳ ಎದುರು ಈ ಒಣದ್ರಾಕ್ಷಿ ಕೊಂಚ ಅಗ್ಗವಾಗಿರುವ ಕಾರಣಕ್ಕೆ ಹೆಚ್ಚಿನವರು ಈ ಅದ್ಭುತ ಫಲಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಆದರೆ ಇದರ ಸೇವನೆಯಿಂದ ಬಹಳಷ್ಟು ಪ್ರಯೋಜನಗಳಿವೆ. 
ವಿಟಾಮಿನ್, ಖನಿಜ, ಆಂಟಿ ಆಕ್ಸಿಡೆಂಟ್‌ಗಳನ್ನು ಹೇರಳವಾಗಿ ಹೊಂದಿರುವ ಒಣ ದ್ರಾಕ್ಷಿ, ಮಕ್ಕಳು ಮತ್ತು ದೈಹಿಕ ಕ್ಷಮತೆಯ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಅತ್ಯುತ್ತಮ. ಅಷ್ಟೇ ಅಲ್ಲ, ಒಣ ದ್ರಾಕ್ಷಿ ಕ್ಯಾನ್ಸರ್ ಕಾರಕ ಜೀವಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನೂ ಹೊಂದಿದೆ.
 
ಈ ದ್ರಾಕ್ಷಿಯನ್ನು ಹೀಗೇ ತಿನ್ನುವುದರಿಂದ ಇದರಲ್ಲಿ ಸಾಂದ್ರೀಕೃತವಾಗಿರುವ ಪೋಷಕಾಂಶಗಳು ಲಭ್ಯವಾಗುವುದಿಲ್ಲ.  
ಬದಲಿಗೆ ಇವುಗಳನ್ನು ಕೊಂಚಕಾಲ ನೀರಿನಲ್ಲಿ ನೆನೆಸಿಡುವ ಮೂಲಕ ಈ ಪೋಷಕಾಂಶಗಳ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ನಿತ್ಯವೂ ಸೇವಿಸಲು ಸುಮಾರು ಎಂಟು ಹತ್ತು ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ಒಂದು ಲೋಟ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ನೆನೆಸಿಟ್ಟ ದ್ರಾಕ್ಷಿಗಳನ್ನು ತಿಂದು ಅದರ ನೀರನ್ನು ಕುಡಿಯುವುದರಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆಯಬಹುದು.
 
1. ಲಿವರ್‌ನ ಆರೋಗ್ಯಕ್ಕೆ ಒಹಳ ಒಳ್ಳೆಯದು
ಅದರಲ್ಲೂ ವಿಶೇಷವಾಗಿ ಯಕೃತ್‌ನ (ಲಿವರ್‌) ಆರೋಗ್ಯ ಈ ನೀರಿನ ನಿಯಮಿತ ಸೇವನೆಯಿಂದ ಉತ್ತಮಗೊಳ್ಳುತ್ತದೆ. ಇದೇ ಕಾರಣಕ್ಕೆ ಈ ನೀರನ್ನು ಕೆಲವಾರು ಟಾನಿಕ್ ಮತ್ತು ಔಷಧಿಗಳಲ್ಲಿ ಬಳಸಲಾಗುತ್ತಿದೆ.
 
2. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ
ಸುಮಾರು ಹತ್ತು ಹನ್ನೆರಡು ಒಣದ್ರಾಕ್ಷಿಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.
 
3. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಈ ಪುಟ್ಟ ಒಣಫಲದಲ್ಲಿ ಹಲವಾರು ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಪ್ರತಿದಿನ ಒಂದು ಲೋಟ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಬಹುದು.
 
4. ಸಣ್ಣಕರುಳಿನಲ್ಲಿರುವ ವ್ಯರ್ಥ ಪದಾರ್ಥಗಳನ್ನು ಸುಲಭವಾಗಿ ಹೊರಹಾಕುತ್ತದೆ
ಒಣ ದಾಕ್ಷಿ ಅಥವಾ ನೆನೆಸಿಟ್ಟ ದಾಕ್ಷಿಯ ಸೇವನೆಯಿಂದ ಸಣ್ಣಕರುಳಿನಲ್ಲಿರುವ ವ್ಯರ್ಥ ಪದಾರ್ಥಗಳನ್ನು ಸುಲಭವಾಗಿ ಹೊರಹಾಕುತ್ತದೆ.
 
5. ಮೂಳೆಗಳು ದೃಢಗೊಳ್ಳುತ್ತವೆ
ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇರುತ್ತವೆ. ಇದರೊಂದಿಗೆ ಇರುವ ಇನ್ನೂ ಹಲವು ಸೂಕ್ಷ್ಮ ಪೋಷಕಾಂಶಗಳು ಈ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುವ ಮೂಲಕ ಮೂಳೆಗಳು ಆರೋಗ್ಯಕರ ಮತ್ತು ದೃಢವಾಗುತ್ತವೆ.
 
6.ರಕ್ತಹೀನತೆಗೆ ಉತ್ತಮ
ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣವೂ ಇದೆ. ನೀರಿನಲ್ಲಿ ನೆನೆಸಿಟ್ಟ ಒಣದ್ರಾಕ್ಷಿಯನ್ನು ಸೇವಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚುತ್ತದೆ ಹಾಗೂ ರಕ್ತಹೀನತೆಯ ತೊಂದರೆಯಿಂದ ರಕ್ಷಿಸುತ್ತದೆ.
 
7. ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ
ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಲು ಒಣದ್ರಾಕ್ಷಿ ನೆನೆಸಿದ ನೀರು ಉತ್ತಮವಾಗಿದ್ದು ಇದರಿಂದ ಮೂತ್ರಪಿಂಡಗಳ ಒಳಗೆ ಕಲ್ಲು ಉಂಟಾಗುವುದು,ಸೋಂಕು ಉಂಟಾಗುವುದು ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು.
 
8. ದೈಹಿಕ ಬಲವನ್ನು ಹೆಚ್ಚಿಸುತ್ತದೆ
ಕ್ರೀಡಾಪಟುಗಳು ತಮ್ಮ ಬಲ ವೃದ್ಧಿಸಲು ಒಣದಾಕ್ಷಿ ಅಥವಾ ನೆನೆಸಿಟ್ಟ ದಾಕ್ಷಿಯ ಸೇವನೆ ಮಾಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉಳಿದಿರುವ ಚಪಾತಿಯಿಂದ ಚಾಟ್ಸ್ ಮಾಡಿ...!!