Select Your Language

Notifications

webdunia
webdunia
webdunia
webdunia

ಗೋಮೂತ್ರ ಯಾವ ಯಾವ ರೋಗಗಳಿಗೆ ರಾಮಬಾಣ ಗೊತ್ತಾ?

ಗೋಮೂತ್ರ ಯಾವ ಯಾವ ರೋಗಗಳಿಗೆ ರಾಮಬಾಣ ಗೊತ್ತಾ?

ಅತಿಥಾ

ಬೆಂಗಳೂರು , ಗುರುವಾರ, 4 ಜನವರಿ 2018 (13:14 IST)
ವೇದಗಳು, ಮಂತ್ರಗಳು, ಪುರಾಣಗಳಿಗೆ ಭಾರತ ತವರುಮನೆ. ಕೆಲವು ಸಾವಿರ ವರ್ಷಗಳ ಹಿಂದೆ ದೇವತೆಗಳ ನಡೆದಾಡಿದ ಈ ಪುಣ್ಯಭೂಮಿ ಮೇಲೆ ವನ್ಯಪ್ರಾಣಿಗಳೂ ಸಹ ಗೌರವ ಪಡೆದುಕೊಂಡವು. ಅಂತಹವುಗಳಲ್ಲಿ ವಿಶೇಷವಾದ ಪ್ರಾಣಿ ಗೋವು. ಹಸುವಿನಿಂದ ಬರುವ ಹಾಲು, ಮೊಸರು, ಬೆಣ್ಣೆ, ಸಗಣಿ, ಮೂತ್ರಗಳನ್ನು ಪಂಚಗವ್ಯಗಳು, ಪಂಚಾಮೃತ ಎಂದು ಕರೆಯುತ್ತಾರೆ.
ಗೋಮೂತ್ರ ಒಂದು ಉತ್ತಮ ಸಿದ್ಧರಸ, ಹೃದಯಕ್ಕೆ ಉತ್ತಮವಾದ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವ, ಆಯಸ್ಸು ಹೆಚ್ಚಿಸುವ, ಪಿತ್ತವನ್ನು ಸಮತೋಲನದಲ್ಲಿರಿಸುವ, ಶ್ವಾಸ ಮತ್ತು ಮೂಗಿನೊಳಗಣ ಲೋಳೆಯನ್ನು ಉತ್ತಮವಾಗಿಸುವ, ಹೃದಯತೊಂದರೆಗಳನ್ನು ನಿವಾರಿಸುವ ಮತ್ತು ವಿಷದ ಪರಿಣಾಮವನ್ನು ಕಡಿಮೆಗೊಳಿಸುವ ಶಕ್ತಿಯುಳ್ಳದ್ದಾಗಿದೆ. 
 
ಕಹಿಯಾಗಿ, ಬೆಚ್ಚಗೆ ಇರುವ ಗೋಮೂತ್ರದಿಂದ ಉದರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ವಾತ ಪಿತ್ತಗಳನ್ನು ಸರಿತೂಗಿಸುತ್ತದೆ. ಇದರಲ್ಲಿ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಕ್ಲೋರೈಡ್, ಯೂರಿಯಾ, ಅಮೋನಿಯಾ, ಸಲ್ಫರ್, ಯೂರಿಕ್ ಆಸಿಡ್, ಫಾಸ್ಫೇಟ್, ಮ್ಯಾಂಗನೀಸ್, ಕಾರ್ಬೋಲಿಕ್ ಆಸಿಡ್‌ನಂತಹ ಖನಿಜ ಲವಣಗಳಷ್ಟೇ ಅಲ್ಲದೆ ವಿಟಮಿನ್ ಎ, ಬಿ, ಡಿ, ಇ ಗಳು ಇವೆ ಎಂದು ಆಧುನಿಕ ಸಂಶೋಧನೆಗಳಲ್ಲಿ ಪತ್ತೆಯಾಗಿದೆ. 
 
ಗೋಮೂತ್ರವನ್ನು ಒಂದು ಲೋಟ ಕುಡಿಯುವ ನೀರಿಗೆ ಕೆಲವೇ ಬಿಂದುಗಳಷ್ಟು ಸೇರಿಸಿ ಮನೆಯ ಸುತ್ತಲೂ ಪ್ರೋಕ್ಷಳಿಸುವ ಮೂಲಕ ಮನೆಯ ಒಳಗೆ ದುಷ್ಟಶಕ್ತಿಗಳ ಪ್ರವೇಶ ತಡೆಯಲು ಸಾಧ್ಯ. ಪರ್ಯಾಯವಾಗಿ ಒಂದು ಬಕೆಟ್ ನೀರಿಗೆ ಕೊಂಚ ಗೋಮೂತ್ರ ಸೇರಿಸಿ ಸ್ನಾನ ಮಾಡಲು ಬಳಸಬಹುದು.
 
1. ಲಿವರ್‌ ಕ್ಷಮತೆಗೆ-
ಗೋಮೂತ್ರ ಲಿವರ್‌ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದ ಶುದ್ದೀಕರಣ ಉತ್ತಮಗೊಳ್ಳುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
 
2.ವೃದ್ಧಾಪ್ಯವನ್ನು ನಿಯಂತ್ರಿಸುತ್ತದೆ-
ನಮ್ಮ ದೇಹದಲ್ಲಿ ಅತಿ ಸೂಕ್ಷ್ಮವಾದ ಪೋಷಕಾಹಾರಗಳಿವೆ. ಇವು ನಿತ್ಯಜೀವನಕ್ಕೆ ಶಕ್ತಿ ನೀಡುತ್ತದೆ. ಆದರೆ ಮೂತ್ರದ ಮೂಲಕ ಇವು ಹೊರಹಾಕಲ್ಪಡುತ್ತವೆ. ಈ ಕೊರತೆಯಿಂದ ವೃದ್ಧಾಪ್ಯ ಶೀಘ್ರ ಆವರಿಸುತ್ತದೆ. ಗೋಮೂತ್ರ ಈ ಕೊರತೆಯನ್ನು ನೀಗಿಸುವ ಮೂಲಕ ವೃದ್ಧಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ. ಇದೇ ಕಾರಣಕ್ಕೆ ಇದನ್ನು ಒಂದು ಸಿದ್ಧರಸ ಎಂದು ಹೇಳಲಾಗುತ್ತದೆ.
 
3. ರೋಗಗಳಿಂದ ಮುಕ್ತಿ
ತಾಮ್ರ, ಚಿನ್ನದ ಅಂಶವಿರುವ ಉಪ್ಪು ಮೊದಲಾದವು. ಇವೆಲ್ಲವೂ ದೇಹ ಕಳೆದುಕೊಂಡ ಖನಿಜಗಳನ್ನು ಮರುತುಂಬಿಸಲು ನೆರವಾಗುತ್ತವೆ. ವಿಶೇಷವಾಗಿ ಇದರಲ್ಲಿರುವ ಚಿನ್ನದ ಅಂಶವಿರುವ ಉಪ್ಪು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಅಧಿಕ ಕಾಲ ಯಾವುದೇ ಔಷಧಿಯನ್ನು ಸೇವಿಸಿದರೆ ಅದರ ಕೆಲವಾದರೂ ಅನಗತ್ಯ ಅಂಶಗಳು ದೇಹದಲ್ಲಿ ಉಳಿದುಬಿಡುತ್ತವೆ. ಈ ಅಂಶಗಳು ಹಲವು ರೋಗಗಳಿಗೆ ಆಹ್ವಾನ ನೀಡುತ್ತವೆ. ಗೋಮೂತ್ರ ಈ ಕಣಗಳನ್ನು ನಿವಾರಿಸುವ ಗುಣ ಹೊಂದಿದೆ. 
 
4.ದೈಹಿಕ-ಮಾನಸಿಕ ತೊಂದರೆಗಳಿಂದ ಮುಕ್ತಿ-
ಎಷ್ಟೋ ಸಲ ನಮ್ಮ ಅಂತರಂಗ ಕೆಟ್ಟ ಆಲೋಚನೆಗಳನ್ನು ನೀಡುತ್ತದೆ. ಪರಿಣಾಮವಾಗಿ ಸಂಕುಚಿತಗೊಂಡ ಮನಸ್ಸು ಪಾಪದ ಕಾರ್ಯಗಳತ್ತ ಸೆಳೆಯುತ್ತದೆ. ಇದರಿಂದ ಆರೋಗ್ಯದ ಜೊತೆಗೇ ಯೋಚನೆಗಳೂ ಕೆಡುತ್ತವೆ. ಗೋಮೂತ್ರ ನಲ್ಮೆಯ ಭಾವವನ್ನು ನೀಡುವ ಮೂಲಕ ಮನಸ್ಸಿನ ಯೋಚನೆಗಳು ಧನಾತ್ಮಕವಾಗಿರಲು ನೆರವಾಗುತ್ತವೆ. ಪರಿಣಾಮವಾಗಿ ಹಲವು ದೈಹಿಕ ಮತ್ತು ಮಾನಸಿಕ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ರೆಪ್ಪೆಗಳ ಮೇಲಿನ ಗುಳ್ಳೆಗಳು ನಿವಾರಣೆಯಾಗಲು ಹೀಗೆ ಮಾಡಿ