Select Your Language

Notifications

webdunia
webdunia
webdunia
webdunia

ಟೊಮೆಟೊ, ಸೇಬುಹಣ್ಣು ಸೇವನೆಯಿಂದ ಶ್ವಾಸಕೋಶ ಆರೋಗ್ಯಕರ

ಟೊಮೆಟೊ, ಸೇಬುಹಣ್ಣು ಸೇವನೆಯಿಂದ ಶ್ವಾಸಕೋಶ ಆರೋಗ್ಯಕರ

ಅತಿಥಾ

ಬೆಂಗಳೂರು , ಶುಕ್ರವಾರ, 29 ಡಿಸೆಂಬರ್ 2017 (11:46 IST)
ನಿಮ್ಮ ಶ್ವಾಸಕೋಶಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಆಹಾರದಲ್ಲಿ ನೀವು ಹೆಚ್ಚು ಟೊಮೆಟೋ ಮತ್ತು ಸೇಬುಗಳನ್ನು ಸೇವಿಸುವುದು ಅಗತ್ಯ. ಯುರೋಪಿಯನ್ ರೆಸ್ಪಿರೇಟರಿ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನವು,

ಟೊಮೆಟೊಗಳು ಮತ್ತು ಹಣ್ಣುಗಳು, ವಿಶೇಷವಾಗಿ ಸೇಬುಗಳು, ಹತ್ತು ವರ್ಷಗಳ ಅವಧಿಯಲ್ಲಿ ಜನರ ಶ್ವಾಸಕೋಶವು ಎಷ್ಟು ಕಡಿಮೆಯಾಗುತ್ತದೆ ಎಂಬುದನ್ನು ತಿಳಿಯಪಡಿಸಿದೆ, ಈ ಆಹಾರಗಳು ಆರೋಗ್ಯವನ್ನು ಹೆಚ್ಚಿಸುವ ಕೆಲವು ಪೋಷಕಾಂಶಗಳನ್ನು ಹಂಚಿಕೊಳ್ಳಬಹುದೆಂದು ಸೂಚಿಸುತ್ತದೆ. ಟೊಮೆಟೊ ಹಣ್ಣು ಕೇವಲ ಆರೋಗ್ಯವನ್ನು ಕಾಪಾಡದೇ ಲಂಗ್ಸ್‌‌ಗಳನ್ನು ಆರೋಗ್ಯದಿಂದರಲು ಸಹಾಯ ಮಾಡುತ್ತದೆ.
 
ಅಧ್ಯಯನಕ್ಕಾಗಿ, ಸುಮಾರು 650 ವಯಸ್ಕರಲ್ಲಿ ಶ್ವಾಸಕೋಶದ ಕಾರ್ಯವನ್ನು ವಿಶ್ಲೇಷಿಸುವ ಪರೀಕ್ಷೆಗಳು ನಡೆದವು, ನಂತರ 10 ವರ್ಷಗಳ ನಂತರ ಇದೇ ಪರೀಕ್ಷೆಯನ್ನು ನಡೆಸಲಾಯಿತು. ಜರ್ಮನಿ, ನಾರ್ವೆ ಮತ್ತು ಯುನೈಟೆಡ್ ಕಿಂಗ್ಡಮ್‌ನ ಜನರು ಭಾಗವಹಿಸಿದ್ದು ಆಹಾರ ಮತ್ತು ಪೌಷ್ಠಿಕಾಂಶಗಳನ್ನು ವಿಶ್ಲೇಷಿಸುವ ಪ್ರಶ್ನಾವಳಿಗಳಿಗೆ ಉತ್ತರ ನೀಡಿದ್ದಾರೆ.
 
ಇದರ ಜೊತೆಯಲ್ಲಿ ಅವರಿಗೆ ಸ್ಪಿರೊಮೆಟ್ರಿ ಪರೀಕ್ಷೆ ನೀಡಲಾಗಿತ್ತು, ಅದು ಅವರ ಶ್ವಾಸಕೋಶಗಳು ಎಷ್ಟು ಆಮ್ಲಜನಕವನ್ನು ತೆಗೆದುಕೊಳ್ಳಬಹುದು ಎಂದು ಅಳೆಯುತ್ತದೆ. ಸಂಶೋಧಕರ ತಂಡವು ಟೊಮೆಟೊ ಶ್ವಾಸಕೋಶದ ಆರೋಗ್ಯವನ್ನು ಹೇಗೆ ಕಾಪಾಡುತ್ತದೆ ಎಂದು ತಿಳಿಸಿದೆ, ಪ್ರತಿ ದಿನ ಮೂರು ಇತರ ತಾಜಾ ಹಣ್ಣುಗಳನ್ನು ಸೇವಿಸುವುದರಿಂದ ಲಂಗ್ಸ್‌ನ ಆರೋಗ್ಯವು ನಿಧಾನಗತಿಯಲ್ಲಿ ಸುಧಾರಿಸುತ್ತದೆ ಆದರೆ ಟೊಮೆಟೊ ಹಣ್ಣಿನ ಸೇವೆನಯು ಶೀಘ್ರವೇ ಶ್ವಾಸಕೋಶದ ಸಮಸ್ಯೆಯು ಹತೋಟಿಗೆ ಬರುತ್ತದೆ. ಟೊಮೆಟೊ ಸಾಸ್‌ನಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರುವ ಸಂಸ್ಕರಿಸಿದ ಆಹಾರವು ಸಾಮಾನ್ಯ ಟೊಮೆಟೊಗಳಂತೆ, ವಿಶೇಷವಾಗಿ ಶ್ವಾಸಕೋಶದ ಆರೋಗ್ಯದ ವಿಷಯದಲ್ಲಿ ಪರಿಣಾಮ ಬೀರುವುದಿಲ್ಲ.
 
ಎಂದಿಗೂ ಧೂಮಪಾನ ಮಾಡದ ಜನರು ಸಹ ಸಾಕಷ್ಟು ಪ್ರಮಾಣದ ಟೊಮೆಟೊಗಳನ್ನು ಸೇವಿಸುವುದರಿಂದ ಪ್ರಯೋಜನ ಪಡೆಯುತ್ತಾರೆ. ವಯಸ್ಸಾದಂತೆ, ನಮ್ಮ ಶ್ವಾಸಕೋಶಗಳು ಚೈತನ್ಯ ಕಳೆದುಕೊಳ್ಳುತ್ತವೆ ಹಾಗಾಗಿ ಟೊಮೆಟೊವನ್ನು ಸೇವಿಸುವ ಮೂಲಕ ನೀವು ಅವುಗಳ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕಳಪೆ ಶ್ವಾಸಕೋಶದ ಕಾರ್ಯವು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು, ವಿಶೇಷವಾಗಿ ಅದು ಹೃದಯಾಘಾತವನ್ನು ಒಳಗೊಂಡಿರುತ್ತದೆ.
 
ಸಂಶೋಧಕರ ಪ್ರಕಾರ, ಹೆಚ್ಚುವರಿಯಾಗಿ ನಿಮ್ಮ ಶ್ವಾಸಕೋಶವನ್ನು ಆರೋಗ್ಯ ಪೂರ್ಣವಗಿ ಇರಿಸುತ್ತದೆ, ಟೊಮೆಟೊ ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಹೃದಯ ಸಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ, ಟೊಮೆಟೊಗಳನ್ನು ದಿನನಿತ್ಯದ ಆಹಾರದಲ್ಲಿ ಹೆಚ್ಚು ಹೆಚ್ಚು ಬಳಸಿ ಹಾಗೂ ಆರೋಗ್ಯ ಪೂರ್ಣ ಶ್ವಾಸಕೋಶಗಳನ್ನು ನಿಮ್ಮದಾಗಿಸಿಕೊಳ್ಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೀನು ಸೇವಿಸಿದ್ರೆ ಮೆದಳು ಚುರುಕಂತೆ : ಅಧ್ಯಯನ