Select Your Language

Notifications

webdunia
webdunia
webdunia
webdunia

ವೇಗಿಗಳ ಬ್ರಹ್ಮಾಸ್ತ್ರ ಬಿಟ್ಟು ಬೆದರಿಸುವ ಆಫ್ರಿಕನ್ನರಿಗೆ ಸ್ಪಿನ್ ರುಚಿ ತೋರಿಸಿದ ಟೀಂ ಇಂಡಿಯಾ

ವೇಗಿಗಳ ಬ್ರಹ್ಮಾಸ್ತ್ರ ಬಿಟ್ಟು ಬೆದರಿಸುವ ಆಫ್ರಿಕನ್ನರಿಗೆ ಸ್ಪಿನ್ ರುಚಿ ತೋರಿಸಿದ ಟೀಂ ಇಂಡಿಯಾ
ಸೆಂಚೂರಿಯನ್ , ಭಾನುವಾರ, 4 ಫೆಬ್ರವರಿ 2018 (16:02 IST)
ಸೆಂಚೂರಿಯನ್: ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಸ್ಪಿನ್ ದಾಳಿಗೆ ತತ್ತರಿಸಿದ ದ.ಆಫ್ರಿಕಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕೇವಲ 118 ರನ್ ಗಳಿಗೆ ಆಲೌಟ್ ಆಗಿದೆ.
 

ಟೆಸ್ಟ್ ಸರಣಿಯಲ್ಲಿ ಆಫ್ರಿಕಾ ವೇಗಿಗಳನ್ನು ಬಿಟ್ಟು ಟೀಂ ಇಂಡಿಯಾವನ್ನು ಮೂಲೆಗುಂಪು ಮಾಡಿದ್ದಕ್ಕೆ ಏಕದಿನ ಸರಣಿಯಲ್ಲಿ ಸ್ಪಿನ್ ದಾಳಿ ಮೂಲಕ ಟೀಂ ಇಂಡಿಯಾ ತಿರುಗೇಟು ನೀಡಿದೆ. ಇದೀಗ ಭಾರತಕ್ಕೆ ಈ ಪಂದ್ಯ ಗೆಲ್ಲಲಯ 119 ರನ್ ಗಳಿಸಿದರೆ ಸಾಕು.

ಆರಂಭದ ಓವರ್ ನಿಂದಲೂ ವಿಕೆಟ್ ಮೇಲೆ ವಿಕೆಟ್ ಕಿತ್ತ ಕುಲದೀಪ್-ಚಾಹಲ್ ಜೋಡಿ ಎದುರಾಳಿಗಳನ್ನು ದಂಗುಬಡಿಸಿತು. ಚಾಹಲ್ 5 ವಿಕೆಟ್ ಕಬಳಿಸಿದರೆ, ಕುಲದೀಪ್ 3 ವಿಕೆಟ್ ಕಿತ್ತರು. ಉಳಿದ ಒಂದೊಂದು ವಿಕೆಟ್ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಪಾಲಾಯಿತು.  ಅಂತೂ ಸ್ವದೇಶದಲ್ಲಿ ಮಾತ್ರ ಸ್ಪಿನ್ ಬಲದಿಂದ ಭಾರತ ಗೆಲ್ಲುತ್ತದೆ ಎಂಬ ಅಪವಾದಕ್ಕೆ ಟೀಂ ಇಂಡಿಯಾ ತಕ್ಕ ಉತ್ತರ ನೀಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ