Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿ ಆಡಲಿಳಿದ ದ.ಆಫ್ರಿಕಾಗೆ ಬಿಗ್ ಶಾಕ್!

ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿ ಆಡಲಿಳಿದ ದ.ಆಫ್ರಿಕಾಗೆ ಬಿಗ್ ಶಾಕ್!
ಜೊಹಾನ್ಸ್ ಬರ್ಗ್ , ಶನಿವಾರ, 3 ಫೆಬ್ರವರಿ 2018 (10:44 IST)
ಜೊಹಾನ್ಸ್ ಬರ್ಗ್: ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಗೆಲ್ಲುವ ಅನಿವಾರ್ಯತೆಯಲ್ಲಿರುವ ದ.ಆಫ್ರಿಕಾಗೆ ಬಿಗ್ ಶಾಕ್ ನಾಯಕ ಫಾ ಡು ಪ್ಲೆಸಿಸ್ ರೂಪದಲ್ಲಿ ಬಂದಿದೆ.
 

ಈಗಾಗಲೇ ಪ್ರಮುಖ ಆಟಗಾರ ಎಬಿಡಿ ವಿಲಿಯರ್ಸ್ ಗಾಯಾಳುವಾಗಿ ತಂಡಕ್ಕೆ ಲಾಸ್ ಆಗಿರುವ ಬೆನ್ನಲ್ಲೇ ನಾಯಕ ಪ್ಲೆಸಿಸ್ ಗಾಯಾಳುವಾಗಿ ಏಕದಿನ ಮತ್ತು ಟಿ20 ಸರಣಿಯಿಂದ ಔಟ್ ಆಗಿರುವ ಆಘಾತಕಾರಿ ಸುದ್ದಿ ಬಂದಿದೆ.

ಮೊದಲ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಪ್ಲೆಸಿಸ್ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ. ಸದ್ಯ ಆಫ್ರಿಕಾ ತಂಡದಲ್ಲಿ ಇನ್ ಫಾರ್ಮ್ ನಲ್ಲಿದ್ದ ಬ್ಯಾಟ್ಸ್ ಮನ್ ಎಂದರೆ ಪ್ಲೆಸಿಸ್ ಆಗದ್ದರು. ಇದೀಗ ಅವರೇ ಸರಣಿಯಿಂದ ಹೊರಗುಳಿಯಬೇಕಾಗಿರುವುದು ಅತಿಥೇಯ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆಲ್ಲಲು ಹುಡುಗರಿಗೆ ದ್ರಾವಿಡ್ ಮಾಡಿದ ಖಡಕ್ ಕಟ್ಟಪ್ಪಣೆ ಏನು ಗೊತ್ತಾ?!