Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಕ್ರಿಕೆಟ್: ನ್ಯೂಜಿಲೆಂಡ್ ಗೆ ಆಫ್ರಿಕಾ ವಿರುದ್ಧ ಹೀನಾಯ ಸೋಲು

ಏಕದಿನ ವಿಶ್ವಕಪ್ ಕ್ರಿಕೆಟ್: ನ್ಯೂಜಿಲೆಂಡ್ ಗೆ ಆಫ್ರಿಕಾ ವಿರುದ್ಧ ಹೀನಾಯ ಸೋಲು
ಪುಣೆ , ಬುಧವಾರ, 1 ನವೆಂಬರ್ 2023 (21:12 IST)
ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ರಲ್ಲಿ ಆರಂಭಿಕ ಪಂದ್ಯಗಳಲ್ಲಿ ತೋರಿದ್ದ ಭರ್ಜರಿ ಪ್ರದರ್ಶನವನ್ನು ಕಾಯ್ದುಕೊಳ್ಳುವಲ್ಲಿ ನ್ಯೂಜಿಲೆಂಡ್ ವಿಫಲವಾಗಿದೆ.

ದ.ಆಫ್ರಿಕಾ ವಿರುದ್ಧ ಇಂದಿನ ಪಂದ್ಯದಲ್ಲಿ 190 ರನ್ ಗಳ ಭಾರೀ ಅಂತರದಿಂದ ಹೀನಾಯ ಸೋಲುಂಡ ಕಿವೀಸ್ ಈ ಕೂಟದಲ್ಲಿ ಹ್ಯಾಟ್ರಿಕ್ ಸೋಲುಂಡಂತಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ರಿಕಾ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತ್ತು.

ಈ ಬೃಹತ್ ಮೊತ್ತ ಬೆನ್ನತ್ತಲು ಹೊರಟ ಕಿವೀಸ್ ಸ್ಪಿನ್ ದಾಳಿಗೆ ನಲುಗಿ ಸಂಪೂರ್ಣ ನೆಲಕಚ್ಚಿತು. ವಿಶೇಷವಾಗಿ ಭಾರತೀಯ ಮೂಲದ ಸ್ಪಿನ್ನರ್ ಕೇಶವ್ ಮಹಾರಾಜ್ ದಾಳಿಗೆ ಕಿವೀಸ್ ಮಧ್ಯಮ ಕ್ರಮಾಂಕ ನಿರುತ್ತರವಾಯಿತು. ಕೇಶವ್ ವಿಕೆಟ್ ಕಬಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಮಾರ್ಕೊ ಜೇನ್ ಸನ್ 3 ವಿಕೆಟ್ ಪಡೆದರು. ಕಿವೀಸ್ ಪರ ವಿಲ್ ಯಂಗ್ 33, ಗ್ಲೆನ್ ಫಿಲಿಪ್ಸ್ ರನ್ ಗಳಿಸಿದರು. ಅಂತಿಮವಾಗಿ ಕಿವೀಸ್ 35.3 ಓವರ್ ಗಳಲ್ಲಿ 167 ರನ್ ಗಳಿಸಲಷ್ಟೇ ಶಕ್ತವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ವಿಶ್ವಕಪ್: ಕಿವೀಸ್ ವಿರುದ್ಧವೂ ಮುಂದುವರಿದ ದ.ಆಫ್ರಿಕಾ ಪ್ರಚಂಡ ಬ್ಯಾಟಿಂಗ್