Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಕಿವೀಸ್-ಆಫ್ರಿಕಾ ನಡುವೆ ಜಿದ್ದಾಜಿದ್ದಿನ ಪಂದ್ಯ

ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಕಿವೀಸ್-ಆಫ್ರಿಕಾ ನಡುವೆ ಜಿದ್ದಾಜಿದ್ದಿನ ಪಂದ್ಯ
ಪುಣೆ , ಬುಧವಾರ, 1 ನವೆಂಬರ್ 2023 (10:25 IST)
ಪುಣೆ: ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಪ್ರಬಲ ತಂಡಗಳಾದ ದ.ಆಫ್ರಿಕಾ-ನ್ಯೂಜಿಲೆಂಡ್ ನಡುವೆ ಜಿದ್ದಾಜಿದ್ದಿನ ಪಂದ್ಯವಿದೆ.

ದ.ಆಫ್ರಿಕಾ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳೂ ಈ ಏಕದಿನ ವಿಶ್ವಕಪ್ ನಲ್ಲಿ ಸಮಾನ ಸಾಮರ್ಥ್ಯ ತೋರಿವೆ. ಆ ಪೈಕಿ ಕಿವೀಸ್ ಕಳೆದ ಎರಡು ಪಂದ್ಯಗಳನ್ನು ಕೂದಲೆಳೆಯಲ್ಲಿ ಸೋತು ಹತಾಶೆಯಲ್ಲಿದೆ. ಆಡಿದ 6 ಪಂದ್ಯಗಳಿಂದ 4 ಗೆಲುವು ಕಂಡಿರುವ ಕಿವೀಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇತ್ತ ದ.ಆಫ್ರಿಕಾ ಒಟ್ಟು ಆಡಿದ 6 ಪಂದ್ಯಗಳ ಪೈಕಿ ಸೋತಿದ್ದು ಕೇವಲ ಒಂದು ಪಂದ್ಯ ಮಾತ್ರ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿದ್ದರೂ ಆಫ್ರಿಕಾ ರನ್ ರೇಟ್ ಅತ್ಯುತ್ತಮವಾಗಿದೆ. ಹೀಗಾಗಿ ಎಲ್ಲಾ ಪಂದ್ಯಗಳಲ್ಲೂ ಅದು ಪಡೆದ ಗೆಲುವಿನ ಅಂತರ ದೊಡ್ಡದು ಎಂದೇ ಹೇಳಬಹುದು. ಹೀಗಾಗಿ ಇಂದಿನ ಪಂದ್ಯದಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನ ಪಂದ್ಯ: ಈಡನ್ ಗಾರ್ಡನ್ ನಲ್ಲಿ ಇರಲಿದೆ ಸರ್ಪೈಸ್!