Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್: ಕಿವೀಸ್ ವಿರುದ್ಧವೂ ಮುಂದುವರಿದ ದ.ಆಫ್ರಿಕಾ ಪ್ರಚಂಡ ಬ್ಯಾಟಿಂಗ್

ಏಕದಿನ ವಿಶ್ವಕಪ್: ಕಿವೀಸ್ ವಿರುದ್ಧವೂ ಮುಂದುವರಿದ ದ.ಆಫ್ರಿಕಾ ಪ್ರಚಂಡ ಬ್ಯಾಟಿಂಗ್
ಪುಣೆ , ಬುಧವಾರ, 1 ನವೆಂಬರ್ 2023 (18:01 IST)
ಪುಣೆ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ದ.ಆಫ್ರಿಕಾ ಬ್ಯಾಟಿಂಗ್ ಅಬ್ಬರ ಮುಂದುವರಿದಿದೆ. ಇಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದೆ.

ಆಫ್ರಿಕಾ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ ಆರಂಭಿಕ ಕ್ವಿಂಟನ್ ಡಿ ಕಾಕ್ 116 ಎಸೆತದಲ್ಲಿ 114 ರನ್ ಗಳಿಸಿದರೆ ವ್ಯಾನ್ ಡೇರ್ ದುಸ್ಸೇನ್ 133 ರನ್ ಗಳಿಸಿದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ 30 ಎಸೆತಗಳಿಂದ 53 ರನ್ ಚಚ್ಚಿದರು. ಇದರಿಂದಾಗಿ ಆಫ್ರಿಕಾ ಮತ್ತೊಮ್ಮೆ ಬೃಹತ್ ಮೊತ್ತ ಪೇರಿಸಿತು.

ನ್ಯೂಜಿಲೆಂಡ್ ಪರ ಟಿಮ್ ಸೌಥಿ 2, ಟ್ರೆಂಟ್ ಬೌಲ್ಟ್, ಜೇಮ್ಸ್ ನೀಶಾಂ ತಲಾ 1 ವಿಕೆಟ್ ಕಬಳಿಸಿದರು. ಇದೀಗ ಕಿವೀಸ್ ಗೆಲ್ಲಲು 358 ರನ್ ಗಳಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಟೀಂ ಇಂಡಿಯಾ ಜರ್ಸಿ ತೊಟ್ಟ ರೋಹಿತ್ ಮಗಳು ಸಮೈರಾ