Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ಕೊಡಲು ಕಾರಣ ವಿವರಿಸಿದ ಮಾಜಿ ಕ್ರಿಕೆಟಿಗ

ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ಕೊಡಲು ಕಾರಣ ವಿವರಿಸಿದ ಮಾಜಿ ಕ್ರಿಕೆಟಿಗ
ಮುಂಬೈ , ಮಂಗಳವಾರ, 20 ನವೆಂಬರ್ 2018 (09:14 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ನಾಯಕ ವಿರಾಟ್ ಕೊಹ್ಲಿ ಜತೆಗಿನ ಹೊಂದಾಣಿಕೆ ಕೊರತೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.

ಇದು ಟೀಂ ಇಂಡಿಯಾ ಕ್ರಿಕೆಟ್ ನಲ್ಲಿ ವಿವಾದ ಸೃಷ್ಟಿಸಿದ ವಿಚಾರವಾಗಿತ್ತು. ಈ ವಿಚಾರದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾಜಿ ಕ್ರಿಕೆಟಿಗ ಬಿಶನ್ ಸಿಂಗ್ ಬೇಡಿ ಮಾತನಾಡಿದ್ದಾರೆ.

‘ಸದ್ಯಕ್ಕೆ ಭಾರತೀಯ ಕ್ರಿಕೆಟ್ ನಲ್ಲಿ ಒಬ್ಬರ ಮಾತು ಮಾತ್ರ ನಡೆಯುತ್ತಿದೆ. ಅದು ನಾಯಕ ವಿರಾಟ್ ಕೊಹ್ಲಿಯದ್ದು. ಅವರು ಒಂಥರಾ ಸುಲ್ತಾನನಂತಾಗಿದ್ದಾರೆ. ಎಲ್ಲವೂ ಅವರ ಇಷ್ಟದಂತೇ ನಡೆಯುತ್ತಿದೆ. ಇದೇ ಕಾರಣಕ್ಕೇ ಅನಿಲ್ ಕುಂಬ್ಳೆಯೂ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು’ ಎಂದು ಬಿಶನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಇಲ್ಲಿಂದ ಹಾಗೇ ಸುಮ್ಮನೆ ಹೋಗಲ್ಲ ಎಂದ ರೋಹಿತ್ ಶರ್ಮಾ