Select Your Language

Notifications

webdunia
webdunia
webdunia
webdunia

ಸ್ಲೆಡ್ಜಿಂಗ್ ಇಲ್ಲ ಎಂದು ಖುಷಿಪಟ್ಟ ವಿರಾಟ್ ಕೊಹ್ಲಿಗೆ ಆಸೀಸ್ ವೇಗಿ ಟಾಂಗ್

ಸ್ಲೆಡ್ಜಿಂಗ್ ಇಲ್ಲ ಎಂದು ಖುಷಿಪಟ್ಟ ವಿರಾಟ್ ಕೊಹ್ಲಿಗೆ ಆಸೀಸ್ ವೇಗಿ ಟಾಂಗ್
ಸಿಡ್ನಿ , ಭಾನುವಾರ, 18 ನವೆಂಬರ್ 2018 (09:24 IST)
ಸಿಡ್ನಿ: ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಲೆಡ್ಜಿಂಗ್ ಇಲ್ಲದೇ ಆರಾಮವಾಗಿ ಕ್ರಿಕೆಟ್ ಆಡಬಹುದು ಎಂದು ಖುಷಿಪಟ್ಟಿದ್ದ ವಿರಾಟ್ ಕೊಹ್ಲಿಗೆ ಆಸೀಸ್ ವೇಗಿ ಮಿಚೆಲ್ ಜಾನ್ಸನ್ ಟಾಂಗ್ ಕೊಟ್ಟಿದ್ದಾರೆ.

ಮೈದಾನದಲ್ಲಿ ಜಾನ್ಸನ್ ಮತ್ತು ಕೊಹ್ಲಿ ಹಲವು ಬಾರಿ ಕಿತ್ತಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ‘ನೋ ಸ್ಲೆಡ್ಜಿಂಗ್ ಪಾಲಿಸಿ’ ಬಗ್ಗೆ ಖುಷಿಪಟ್ಟಿದ್ದ ಕೊಹ್ಲಿಗೆ ಜಾನ್ಸನ್ ಟಾಂಗ್ ಕೊಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್ಸನ್ ‘ಕೊಹ್ಲಿಯಿಂದ ಕೂಡಾ ಯಾವುದೇ ಸೆಂಡ್ ಆಫ್ ಕಾರ್ಯಕ್ರಮ ಇರಲ್ಲ ಅಂದುಕೊಳ್ಳುತ್ತೇವೆ’ ಎಂದು ಜಾನ್ಸನ್ ಲೇವಡಿ ಮಾಡಿದ್ದಾರೆ. ಕೊಹ್ಲಿ ಹಿಂದೆ ಆಸ್ಟ್ರೇಲಿಯಾ ಭಾರತ ಪ್ರವಾಸ ಮಾಡಿದ್ದಾಗ ಸ್ಟೀವ್ ಸ್ಮಿತ್ ಗೆ ಸೆಂಡ್ ಆಫ್ ಮಾಡುವ ಸನ್ನೆ ಮಾಡಿ ವಿವಾದಕ್ಕೊಳಗಾಗಿದ್ದರು. ಅದನ್ನೇ ಇದೀಗ ಜಾನ್ಸನ್ ಕೆಣಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಯಿಂದ ಕೊಕ್ ಪಡೆದ ಬ್ರೆಂಡನ್ ಮೆಕ್ಕಲಮ್ ವಿರಾಟ್ ಕೊಹ್ಲಿಗೆ ನೀಡಿದ ವಿಶೇಷ ಸಂದೇಶವೇನು ಗೊತ್ತಾ?