Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಆಟಗಾರರಿಗೆ ವಿರಾಟ್ ಕೊಹ್ಲಿಯನ್ನು ಎದುರಿಸಲು ದ.ಆಪ್ರಿಕಾ ನಾಯಕ ಫಾ ಡು ಪ್ಲೆಸಿಸ್ ಪಾಠ

ಆಸ್ಟ್ರೇಲಿಯಾ ಆಟಗಾರರಿಗೆ ವಿರಾಟ್ ಕೊಹ್ಲಿಯನ್ನು ಎದುರಿಸಲು  ದ.ಆಪ್ರಿಕಾ ನಾಯಕ ಫಾ ಡು ಪ್ಲೆಸಿಸ್ ಪಾಠ
ಸಿಡ್ನಿ , ಭಾನುವಾರ, 18 ನವೆಂಬರ್ 2018 (09:30 IST)
ಸಿಡ್ನಿ: ಆಸ್ಟ್ರೇಲಿಯಾ ಸರಣಿಗಾಗಿ ಈಗಾಗಲೇ ಕಾಂಗರೂಗಳ ನಾಡಿಗೆ ಬಂದಿಳಿದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬಲೆ ಹಣಿಯಲು ಎದುರಾಳಿಗಳು ಹೊಂಚು ಹಾಕಿದ್ದಾರೆ.

ಕೊಹ್ಲಿಯನ್ನು ಔಟ್ ಮಾಡಿದರೆ ಟೀಂ ಇಂಡಿಯಾವನ್ನು ಅರ್ಧ ಸೋಲಿಸಿದಂತೆ ಎನ್ನುವ ಸತ್ಯ ಎದುರಾಳಿಗಳಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿ ಇದೀಗ ಕೊಹ್ಲಿ ಬಗ್ಗೆ ತಲೆಕೆಡಿಸಿಕೊಂಡಿರುವ ಆಸೀಸ್ ಆಟಗಾರರಿಗೆ ದ.ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಸಹಾಯಕ್ಕೆ ಬಂದಿದ್ದಾರೆ.

‘ಭಾರತದ ವಿರುದ್ಧ ಸಕ್ಸಸ್ ಆಗಬೇಕಾದರೆ ಕೊಹ್ಲಿಗೆ ಸೈಲೆಂಟ್ ಟ್ರೀಟ್ ಮೆಂಟ್ ಕೊಡಬೇಕು. ಅಂದರೆ ಕೊಹ್ಲಿ ಜತೆ ಯಾವುದೇ ಕಾರಣಕ್ಕೂ ವಾಗ್ಯುದ್ಧದಲ್ಲಿ ತೊಡಗಬಾರದು. ಅವರನ್ನು ಕೆಣಕಿದಷ್ಟು ಆಟದಲ್ಲಿ ಪ್ರತ್ಯುತ್ತರ ಕೊಡುತ್ತಾರೆ. ದ.ಆಫ್ರಿಕಾದಲ್ಲೂ ನಾವು ಕೊಹ್ಲಿಗೆ ಇದೇ ರೀತಿ ಮಾಡಿದ್ದೆವು. ಆದರೆ ಅಲ್ಲಿ ಕೊಹ್ಲಿ ರನ್ ಗಳಿಸಲು ಯಶಸ್ವಿಯಾದರೂ, ಅಷ್ಟೊಂದು ಸಾಧ್ಯವಾಗಿಲ್ಲ’ ಎಂದು ಫಾ ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸ್ಲೆಡ್ಜಿಂಗ್ ಇಲ್ಲ ಎಂದು ಖುಷಿಪಟ್ಟ ವಿರಾಟ್ ಕೊಹ್ಲಿಗೆ ಆಸೀಸ್ ವೇಗಿ ಟಾಂಗ್