Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್ ಕ್ರಿಕೆಟ್: ಜೈಸ್ವಾಲ್ ಶತಕ, ಟೀಂ ಇಂಡಿಯಾ ಭರ್ಜರಿ ಮೊತ್ತ

ಏಷ್ಯನ್ ಗೇಮ್ಸ್ ಕ್ರಿಕೆಟ್: ಜೈಸ್ವಾಲ್ ಶತಕ, ಟೀಂ ಇಂಡಿಯಾ ಭರ್ಜರಿ ಮೊತ್ತ
19 ನೇ ಏಷ್ಯನ್ ಗೇಮ್ಸ್ , ಮಂಗಳವಾರ, 3 ಅಕ್ಟೋಬರ್ 2023 (08:18 IST)
Photo Courtesy: Twitter
ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ನ ಪುರುಷರ ಕ್ರಿಕೆಟ್ ವಿಭಾಗದಲ್ಲಿ ಟೀಂ ಇಂಡಿಯಾ ಇಂದು ನೇಪಾಳ ವಿರುದ್ಧ ಪಂದ್ಯವಾಡುತ್ತಿದ್ದು ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ.

ಭಾರತದ ಪರ ಆರಂಭಿಕ ಯಶಸ್ವಿ ಜೈಸ್ವಾಲ್ ಕೇವಲ 49 ಎಸೆತಗಳಿಂದ 7 ಸಿಕ್ಸರ್ ಸಹಿತ 100 ರನ್ ಗಳಿಸಿದರು. ನಾಯಕ ಋತುರಾಜ್ ಗಾಯಕ್ ವಾಡ್ 25 ರನ್ ಗಳಿಸಿ ಔಟಾದರು. ಈ ನಡುವೆ ತಿಲಕ್ ವರ್ಮ 2, ಜಿತೇಶ್ ಶರ್ಮಾ ಕೇವಲ 5 ರನ್ ಗಳಿಗೆ ಔಟಾಗಿ ನಿರಾಸೆ ಅನುಭವಿಸಿದರು.

ಆದರೆ ಕೊನೆಯಲ್ಲಿ ಸಿಡಿದ ಶಿವಂ ದುಬೆ 19 ಎಸೆತಗಳಿಂದ 25, ಹಾಗೂ ಐಪಿಎಲ್ ಹೀರೋ ರಿಂಕು ಸಿಂಗ್ ಕೇವಲ 15 ಎಸೆತಗಳಿಂದ 4 ಸಿಕ್ಸರ್ ಸಹಿತ ಅಜೇಯ 37 ರನ್ ಸಿಡಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. ಇದೀಗ ನೇಪಾಳ ಗೆಲ್ಲಲು 203 ರನ್ ಗಳಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್: ಟೇಬಲ್ ಟೆನಿಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಭಾರತದ ವನಿತೆಯರು