Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್: ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ 9 ಪದಕ, ಶೂಟಿಂಗ್ ನಲ್ಲಿ 22 ಪದಕ

ಏಷ್ಯನ್ ಗೇಮ್ಸ್: ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ 9 ಪದಕ, ಶೂಟಿಂಗ್ ನಲ್ಲಿ 22 ಪದಕ
ಹ್ಯಾಂಗ್ ಝೂ , ಸೋಮವಾರ, 2 ಅಕ್ಟೋಬರ್ 2023 (08:40 IST)
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಕ್ರೀಡಾ ಪಟುಗಳು ಉತ್ತಮ ನಿರ್ವಹಣೆ ತೋರುತ್ತಿದ್ದಾರೆ. ಅದರಲ್ಲೂ ಭಾರತ ಇದುವರೆಗೆ 53 ಪದಕ ಗೆದ್ದಿದ್ದು ಈ ಪೈಕಿ 9 ಪದಕ ಅಥ್ಲೆಟಿಕ್ಸ್, 22 ಪದಕ ಶೂಟಿಂಗ್ ನಲ್ಲೇ ಬಂದಿದೆ.

ಪುರುಷರ ಶಾಟ್ ಪುಟ್ ಎಸೆತ ಸ್ಪರ್ಧೆಯಲ್ಲಿ ತೇಜೀಂದರ್ ಪಾಲ್ ತೂರ್ ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಕಳೆದ 2018 ರ ಏಷ್ಯಾಡ್ ನಲ್ಲೂ ಅವರು ಚಿನ್ನ ಗೆದ್ದಿದ್ದರು. ಪುರುಷರ 1,500 ಮೀ. ರೇಸ್ ನಲ್ಲಿ ಭಾರತ ಬೆಳ್ಳಿ ಮತ್ತು ಕಂಚು ಎರಡನ್ನೂ ಗೆದ್ದುಕೊಂಡಿದೆ. ಲಾಂಗ್ ಜಂಪ್ ನಲ್ಲಿ ಶ್ರೀಶಂಕರ್ ರಜತ ಪದಕ ಗೆದ್ದರು. ಮಹಿಳೆಯರ 100 ಮೀ. ಹರ್ಡಲ್ಸ್ ನಲ್ಲಿ ಜ್ಯೋತಿ ಯರ್ರಾಜಿ ಬೆಳ್ಳಿ ಪದಕ ಗೆದ್ದುಕೊಂಡರು.

ಶೂಟಿಂಗ್ ನಲ್ಲಿ ಭಾರತ ತಂಡ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿತು. ಪುರುಷರ ಟ್ರ್ಯಾಪ್ ತಂಡ ಚಿನ್ನದ ಪದಕ ಗೆದ್ದುಕೊಂಡರು. ಇಂದೂ ಭಾರತೀಯ ಕ್ರೀಡಾಪಟುಗಳು ಬ್ಯಾಡ್ಮಿಂಟನ್, ಕುದುರೆ ಸವಾರಿ, ಬಿಲ್ಗಾರಕೆ, ಅಥ್ಲೆಟಿಕ್ಸ್ ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಆರಂಭದಲ್ಲೇ ಮಳೆ ಕಾಟ: ಹೀಗಾದ್ರೆ ಕೂಟ ನಡೆಯೋದು ಹೇಗೆ?!