Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್: ಶಾಟ್ ಪುಟ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಕಿರಣ್ ಬಾಲಿಯನ್

ಏಷ್ಯನ್ ಗೇಮ್ಸ್: ಶಾಟ್ ಪುಟ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಕಿರಣ್ ಬಾಲಿಯನ್
ಹ್ಯಾಂಗ್ ಝೂ , ಶನಿವಾರ, 30 ಸೆಪ್ಟಂಬರ್ 2023 (09:00 IST)
Photo Courtesy: Twitter
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮತ್ತೊಂದು ಐತಿಹಾಸಿಕ ಪದಕ ಗೆದ್ದುಕೊಂಡಿದೆ. ಅಥ್ಲೆಟಿಕ್ಸ್ ನಲ್ಲಿ ಶಾಟ್ ಫುಟ್ ತಾರೆ ಕಿರಣ್ ಬಾಲಿಯಾನ್ 72 ವರ್ಷಗಳ ಬಳಿಕ ಮೊದಲ ಕಂಚು ಗೆದ್ದುಕೊಟ್ಟಿದ್ದಾರೆ.

ಶಾಟ್ ಪುಟ್ ನಲ್ಲಿ ಕಳೆದ 72 ವರ್ಷಗಳಲ್ಲಿ ಭಾರತ ಏಷ್ಯಾಡ್ ಪದಕ ಗೆದ್ದಿರಲಿಲ್ಲ. ಇದಕ್ಕೆ ಮೊದಲು 1951 ರಲ್ಲಿ ಆಂಗ್ಲೋ-ಇಂಡಿಯನ್ ತಾರೆ ಬಾರ್ಬರಾ ವೆಬ್ ಸ್ಟರ್ ಶಾಟ್ ಪುಟ್ ನಲ್ಲಿ ಕಂಚು ಗೆದ್ದಿದ್ದರು. ಇದೀಗ ಕಿರಣ್ ಕಂಚು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಒಟ್ಟು 17.36 ಮೀ. ದೂರ ಎಸೆದ ಕಿರಣ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಇದೀಗ ಭಾರತ 8 ಚಿನ್ನದ ಪದಕದೊಂದಿಗೆ ಭಾರತ ಒಟ್ಟು 33 ಪದಕ ತನ್ನದಾಗಿಸಿಕೊಂಡಿದೆ. ಇದೀಗ ಮಹಿಳೆಯರ ಗಾಲ್ಫ್ ನಡೆಯುತ್ತಿದ್ದು ಬೆಂಗಳೂರು ಮೂಲದ ಅದಿತಿ ಅಶೋಕ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಇಂದು ಟೀಂ ಇಂಡಿಯಾಗೆ ಇಂಗ್ಲೆಂಡ್ ಎದುರಾಳಿ