ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಲು ಆಸ್ಟ್ರೇಲಿಯಾ ವಿಮಾನ ಹತ್ತಿದ ಅನುಷ್ಕಾ ಶರ್ಮಾ

ಗುರುವಾರ, 6 ಡಿಸೆಂಬರ್ 2018 (10:50 IST)
ಮುಂಬೈ: ಪತಿ ವಿರಾಟ್ ಕೊಹ್ಲಿ ಜತೆ ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಿಸಲು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.


ಸದ್ಯಕ್ಕೆ ಟೀಂ ಇಂಡಿಯಾ ಜತೆಗೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಟೆಸ್ಟ್ ನಂತರ ಸಿಗುವ ಬ್ರೇಕ್ ನಲ್ಲಿ ಡಿಸೆಂಬರ್ 11 ರಂದು ಈ ಹಾಟ್ ಜೋಡಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ ಆಚರಿಸಲಿದೆ.

ಈಗಾಗಲೇ ಅನುಷ್ಕಾ ತಮ್ಮ ವೆಡ್ಡಿಂಗ್ ಡೇ ಆಚರಿಸುವ ಸ್ಥಳ ನಿಗದಿಪಡಿಸಿದ್ದಾರೆ ಎನ್ನಲಾಗಿದೆ. ಪಂದ್ಯ ಮುಗಿದ ಬಳಿಕ ವಿರಾಟ್ ಕೂಡಾ ಅನುಷ್ಕಾಗೆ ಜತೆಯಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING