Select Your Language

Notifications

webdunia
webdunia
webdunia
webdunia

ಬ್ರಾಡ್ಮನ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಗೆ ಸಿಕ್ಕಿದೆ ಅಪರೂಪದ ಗೌರವ

ಬ್ರಾಡ್ಮನ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಗೆ ಸಿಕ್ಕಿದೆ ಅಪರೂಪದ ಗೌರವ
ಸಿಡ್ನಿ , ಮಂಗಳವಾರ, 4 ಡಿಸೆಂಬರ್ 2018 (09:03 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಂತಕತೆ ಸರ್ ಡೊನಾಲ್ಡ್ ಬ್ರಾಡ್ಮನ್ ಮ್ಯೂಸಿಯಂನಲ್ಲಿ ವಿಶೇಷ ಗೌರವವೊಂದು ದೊರೆತಿದೆ.


2014 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಶತಕ ಗಳಿಸಿದಾಗ ಧರಿಸಿದ್ದ ಜೆರ್ಸಿಗೆ ಹಸ್ತಾಕ್ಷರ ನೀಡಿ ಉಡುಗೊರೆ ನೀಡಿದ್ದರು. ಆ ಜೆರ್ಸಿಯನ್ನು ಈಗ ಬ್ರಾಡ್ಮನ್ ಮ್ಯೂಸಿಯಂನಲ್ಲಿ ಸಚಿನ್ ತೆಂಡುಲ್ಕರ್ ಭಾವಚಿತ್ರದ ಬಳಿ ಇರಿಸಲಾಗಿದೆ.

ಸಾಮಾನ್ಯವಾಗಿ ಬ್ರಾಡ್ಮನ್ ಮ್ಯೂಸಿಯಂನಲ್ಲಿ ವಿಶೇಷ ಕ್ರಿಕೆಟಿಗರ ಸಾಧನೆಗಳನ್ನು, ಪರಿಕರಗಳನ್ನು ಮಾತ್ರ ಪ್ರದರ್ಶನಕ್ಕಿಡಲಾಗುತ್ತದೆ. ಭಾರತೀಯ ಕ್ರಿಕೆಟಿಗರ ಪೈಕಿ ಕಪಿಲ್ ದೇವ್ ಮತ್ತು ಸಚಿನ್ ತೆಂಡುಲ್ಕರ್ ಗೆ ಮಾತ್ರ ಇದುವರೆಗೆ ಈ ಗೌರವ ಸಿಕ್ಕಿತ್ತು. ಈಗ ಕೊಹ್ಲಿಗೂ ಬ್ರಾಡ್ಮನ್ ಮ್ಯೂಸಿಯಂನಲ್ಲಿ ಗೌರವ ಪ್ರಾಪ್ತಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಚ್ ಬೈಗುಳದ ನಂತರ ತಿದ್ದಿಕೊಂಡ ಕೆಎಲ್ ರಾಹುಲ್