Select Your Language

Notifications

webdunia
webdunia
webdunia
webdunia

ಇದೀಗ ಖಚಿತ! ಮೊದಲ ಟೆಸ್ಟ್ ನಿಂದ ಪೃಥ್ವಿ ಶಾ ಔಟ್!

ಇದೀಗ ಖಚಿತ! ಮೊದಲ ಟೆಸ್ಟ್ ನಿಂದ ಪೃಥ್ವಿ ಶಾ ಔಟ್!
ಸಿಡ್ನಿ , ಶುಕ್ರವಾರ, 30 ನವೆಂಬರ್ 2018 (10:52 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 6 ರಿಂದ ಅಡಿಲೇಡ್ ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಪೃಥ್ವಿ ಶಾ ಔಟ್ ಆಗಿದ್ದಾರೆ.


ಅಭ್ಯಾಸ ಪಂದ್ಯದಲ್ಲಿ ಮೊಣಕಾಲು ಉಳುಕಿಸಿಕೊಂಡಿದ್ದ ಪೃಥ್ವಿ ಶಾರನ್ನು ಮೈದಾನದಿಂದ ಎತ್ತಿಕೊಂಡು ಪೆವಿಲಿಯನ್ ಗೆ ಕರೆದೊಯ್ಯಬೇಕಾಯಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ವೈದ್ಯಕೀಯ ತಂಡ ಸ್ಕ್ಯಾನಿಂಗ್ ನಡೆಸಿ ಗಾಯದ ಗಂಭೀರತೆ ಪರೀಕ್ಷೆ ನಡೆಸಿತ್ತು.

ಇದೀಗ ಅವರ ಗಾಯ ಗಂಭೀರವಾಗಿದ್ದು ಮೊದಲ ಟೆಸ್ಟ್ ನಿಂದ ಹೊರಗುಳಿಯಲಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ ಭರವಸೆ ಮೂಡಿಸಿದ್ದ ಪೃಥ್ವಿ ಶಾ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಅದೇನು ದುರಾದೃಷ್ಟವೋ ಮೊದಲ ಟೆಸ್ಟ್ ನಿಂದಲೇ ಹೊರಗುಳಿಯಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಸರಣಿಗೂ ಮೊದಲೇ ಟೀಂ ಇಂಡಿಯಾಗೆ ಪೃಥ್ವಿ ಶಾ ಶಾಕ್