Select Your Language

Notifications

webdunia
webdunia
webdunia
webdunia

ಪೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸೆಲೆಬ್ರಿಟಿ ಯಾರು ಗೊತ್ತಾ?

ಪೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸೆಲೆಬ್ರಿಟಿ ಯಾರು ಗೊತ್ತಾ?
ಮುಂಬೈ , ಗುರುವಾರ, 6 ಡಿಸೆಂಬರ್ 2018 (07:00 IST)
ಮುಂಬೈ : 2018 ನೇ ಸಾಲಿನ ಭಾರತೀಯ ಸೆಲೆಬ್ರಿಟಿ ಪಟ್ಟಿಯಲ್ಲಿ ಬಾಲಿವುಡ್ ನ ನಟರೊಬ್ಬರು ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.


ಹೌದು. ಪೋರ್ಬ್ಸ್ ಬುಧವಾರ 2018 ನೇ ಸಾಲಿನ ಭಾರತೀಯ ಸೆಲೆಬ್ರಿಟಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸತತ ಮೂರನೇ ಬಾರಿಯು ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಪೋರ್ಬ್ಸ್ ಪಟ್ಟಿಯಲ್ಲಿರುವ 100 ಭಾರತೀಯ ಗಣ್ಯರ ಪೈಕಿ ಸಲ್ಮಾನ್ ಖಾನ್ ಈ ಬಾರಿ ಸಿನಿಮಾ, ಉತ್ಪನ್ನಗಳ ಪ್ರಚಾರ ಮೊದಲಾದುವುಗಳಿಂದ 253 ಕೋಟಿ ರೂ. ಆದಾಯ ಗಳಿಕೆ ಮಾಡಿದ್ದಾರೆ. ಈ ಮೂಲಕ ಅವರು ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (228 ಕೋಟಿ.ರೂ.) ಎರಡನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ (185 ಕೋಟಿ ರೂ,) ಮೂರನೇ ಸ್ಥಾನ, ದೀಪಿಕಾ ಪಡುಕೋಣೆ (112 ಕೋಟಿ ರೂ.ಗಳಿಕೆ) ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಐದನೇ ಸ್ಥಾನ, ಅಮೀರ್ ಖಾನ್ ಆರನೇ ಸ್ಥಾನ, ಅಮಿತಾಬ್ ಬಚ್ಚನ್ ಏಳನೇ ಸ್ಥಾನ, ರಣವೀರ್ ಸಿಂಗ್ ಎಂಟನೆ ಸ್ಥಾನ, ಸಚಿನ್ ತೆಂಡೂಲ್ಕರ್ ಒಂಭತ್ತನೇ ಸ್ಥಾನ ಹಾಗೂ  ಅಜಯ್ ದೇವಗನ್ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

‘ದಮಯಂತಿ’ ಚಿತ್ರಕ್ಕೆ ನಟಿ ರಾಧಿಕಾ ತೆಗೆದುಕೊಂಡ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಾ