Select Your Language

Notifications

webdunia
webdunia
webdunia
webdunia

ಅನಿಮಲ್ ಸಿನಿಮಾದಲ್ಲಿ ಇನ್ನು ಬೋಲ್ಡ್ ದೃಶ್ಯಗಳಿರಲ್ಲ!

ಅನಿಮಲ್ ಸಿನಿಮಾದಲ್ಲಿ ಇನ್ನು ಬೋಲ್ಡ್ ದೃಶ್ಯಗಳಿರಲ್ಲ!
ಮುಂಬೈ , ಭಾನುವಾರ, 24 ಡಿಸೆಂಬರ್ 2023 (11:09 IST)
ಮುಂಬೈ: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅನಿಮಲ್ ಸಿನಿಮಾದಲ್ಲಿ ಇನ್ನು ಬೋಲ್ಡ್ ದೃಶ್ಯಗಳಿರಲ್ಲ.

ರಣಬೀರ್ ಕಪೂರ್-ರಶ್ಮಿಕಾ ಜೊತೆಗೆ ತೃಪ್ತಿ ದಿಮ್ರಿ ಕೂಡಾ ಅಭಿನಯಿಸಿದ್ದರು. ಸಿನಿಮಾದ ಕೆಲವೊಂದು ಬೆಡ್ ರೂಂ ಸನ್ನಿವೇಶಗಳು ಪಡ್ಡೆ ಹೈಕಳ ನಿದ್ದೆಗೆಡಿಸಿದ್ದವು. ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬಿಡುಗಡೆಯಾಗಿದೆ.

ಇದೀಗ ಬಾಂಗ್ಲಾದೇಶದಲ್ಲಿ ಅನಿಮಲ್ ಸಿನಿಮಾದ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಅಲ್ಲಿನ ಸೆನ್ಸಾರ್ ಮಂಡಳಿ ಇಂತಹ ದೃಶ್ಯಗಳು ಸೂಕ್ತವಲ್ಲ ಎಂಬ ಕಾರಣಕ್ಕೆ ಕತ್ತರಿ ಹಾಕಲು ಸೂಚಿಸಿದೆ.

ಭಾರತದಲ್ಲಿ ಸಿನಿಮಾಗೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿತ್ತು. ಸಿನಿಮಾದ ಬೋಲ್ಡ್ ದೃಶ್ಯಗಳು ಸಾಕಷ್ಟು ವಿಮರ್ಶೆಗೊಳಗಾಗಿದ್ದವು. ಆದರೆ ಬಾಂಗ್ಲಾದೇಶದಲ್ಲಿ ಇಂಥಹ ದೃಶ್ಯಗಳನ್ನು ಪ್ರಸಾರ ಮಾಡಲು ಅವಕಾಶವನ್ನೇ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್: ಬಾಕ್ಸ್ ಆಫೀಸ್ ದಾಖಲೆ ಉಡೀಸ್ ಮಾಡಿದ ಪ್ರಭಾಸ್