ಫ್ರಾನ್ಸ್ ಫುಟ್ಬಾಲ್ ವಿಶ್ವಕಪ್ ಗೆದ್ದ ಖುಷಿಯಲ್ಲಿ ಎಡವಟ್ಟು ಟ್ವೀಟ್ ಮಾಡಿದ ಕಿರಣ್ ಬೇಡಿ

Webdunia
ಸೋಮವಾರ, 16 ಜುಲೈ 2018 (10:37 IST)
ಪುದುಚೇರಿ: ಫಿಫಾ 2018 ವಿಶ್ವಕಪ್ ಫುಟ್ಬಾಲ್ ಫೈನಲ್ ನಲ್ಲಿ ಫ್ರಾನ್ಸ್ ಗೆದ್ದ ಖುಷಿಯಲ್ಲಿ ವಿಶ್ವದಾದ್ಯಂತ ಅಭಿಮಾನಿಗಳು ಖುಷಿಪಡುತ್ತಿದ್ದರೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಕೂಡಾ ಶುಭಾಷಯ ಕೋರಿದ್ದಾರೆ.

ಆದರೆ ಶುಭಾಷಯ ಕೋರಿ ಟ್ವೀಟ್ ಮಾಡುವಾಗ ಎಡವಟ್ಟು ಮಾಡಿದ್ದು, ಇದೀಗ ಟ್ರೋಲಿಗರ ಟೀಕೆಗೆ ತುತ್ತಾಗಿದ್ದಾರೆ. ‘ನಾವು ಪುದುಚೇರಿಯವರು (ಹಿಂದೆ ಫ್ರೆಂಚ್ ಆಡಳಿತದಲ್ಲಿದ್ದ ಪುದುಚೇರಿ) ಕಪ್ ಗೆದ್ದೆವು. ಸ್ನೇಹಿತರೇ ಅಭಿನಂದನೆಗಳು. ಕ್ರೀಡೆ ಒಂದುಗೂಡಿಸುತ್ತದೆ’ ಎಂದು ಕಿರಣ್ ಬೇಡಿ ಟ್ವೀಟ್ ಮಾಡಿದ್ದರು.

ಆದರೆ ಪುದುಚೇರಿಯನ್ನು ಫ್ರಾನ್ಸ್ ಎಂದು ಹೋಲಿಸಿದ್ದಕ್ಕೆ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ. ನಾವ್ಯಾಕೆ ಇನ್ನೂ ವಸಾಹತು ಮನಸ್ಥಿತಿಯಲ್ಲೇ ಇದ್ದೇವೆ? ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ. ಮತ್ತೆ ಪುದುಚೇರಿ ವಾಸಿಗಳು ನಮಗೆ ಫ್ರಾನ್ಸ್ ಗೆದ್ದರೆ ನಾವೇ ಗೆದ್ದಂತೆ ಅನಿಸುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಿದ್ದರಾಮಯ್ಯ ಮತ್ತೆ ರಾಜ್ಯದ ಸಿಎಂ ಆಗುತ್ತಾರೆ ಎಂದವರ್ಯಾರು ಗೊತ್ತಾ?

ಬೇಸಿಗೆಗೂ ಮೊದಲೇ ಶುರುವಾಯ್ತು ನೀರಿನ ಸಂಕಷ್ಟ!

ಆಡಿಯೋ ಕೇಸ್ ನಿಂದ ನಿರಾಳ; ವಿಶೇಷ ಪೂಜೆ ಸಲ್ಲಿಸಿದ ಬಿಎಸ್ವೈ

ಮೇಷ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರಿಗೆ ಬರುವ ರೋಗಗಳು ಯಾವುವು ಗೊತ್ತಾ?

ಸಂಬಂಧಿಸಿದ ಸುದ್ದಿ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಆಡಿಯೋ ಕೇಸ್ ನಿಂದ ನಿರಾಳ; ವಿಶೇಷ ಪೂಜೆ ಸಲ್ಲಿಸಿದ ಬಿಎಸ್ವೈ

ಬೇಸಿಗೆಗೂ ಮೊದಲೇ ಶುರುವಾಯ್ತು ನೀರಿನ ಸಂಕಷ್ಟ!

ಮುಂದಿನ ಸುದ್ದಿ