ಟೀಂ ಇಂಡಿಯಾ ವೇಗಿಗಳು ಪಿಚ್ ನಲ್ಲಿ ನರ್ತನ ಮಾಡುತ್ತಿದ್ದರೆ ಬೌಂಡರಿ ಗೆರೆ ಬಳಿ ಬಾಂಗ್ರಾ ಡ್ಯಾನ್ಸ್ ಮಾಡಿದ ಶಿಖರ್ ಧವನ್!

Webdunia
ಶನಿವಾರ, 8 ಸೆಪ್ಟಂಬರ್ 2018 (09:08 IST)
ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಭೋಜನ ವಿರಾಮದ ನಂತರ ಟೀಂ ಇಂಡಿಯಾ ವೇಗಿಗಳು ಎದುರಾಳಿಗಳಿಗೆ ಪೆವಿಲಿಯನ್ ಹಾದಿ ತೋರಿಸುತ್ತಿದ್ದರೆ, ಇತ್ತ ಶಿಖರ್ ಧವನ್ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಾ ಅಭಿಮಾನಿಗಳ ಜತೆ ಬಾಂಗ್ರಾ ನೃತ್ಯ ಮಾಡುತ್ತಿದ್ದರು.


ನಿನ್ನೆಯ ದಿನ ಭೋಜನ ವಿರಾಮದವರೆಗೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾದಿಸಿದ್ದ ಇಂಗ್ಲೆಂಡ್ ನಂತರ ಅಂತಿಮ ಟೆಸ್ಟ್ ಪಂದ್ಯವಾಡುತ್ತಿರುವ ಅಲೆಸ್ಟರ್ ಕುಕ್ ವಿಕೆಟ್ ಕಳೆದುಕೊಂಡಿತು. ಅವರು 77 ರನ್ ಗಳಿಸಿದರು. ಇದಾದ ಬಳಿಕ ಇಂಗ್ಲೆಂಡ್ ಇದ್ದಕ್ಕಿದ್ದಂತೆ ಕುಸಿತ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಬಹುಬೇಗ ವಿಕೆಟ್ ಉದುರಿಸಿಕೊಂಡು ಇಂಗ್ಲೆಂಡ್ ಸಂಕಷ್ಟಕ್ಕೀಡಾಯಿತು. ಭಾರತದ ಪರ ಇಶಾಂತ್ ಶರ್ಮಾ 3 ವಿಕೆಟ್ ಕಬಳಿಸಿದರೆ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾಗೆ ತಲಾ ಎರಡು ವಿಕೆಟ್ ಸಿಕ್ಕಿತು. ದಿನದಂತ್ಯಕ್ಕೆ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.

ಒಂದೆಡೆ ವೇಗಿಗಳು ಪಿಚ್ ನಲ್ಲಿ ರುದ್ರ ನರ್ತನ ಮಾಡುತ್ತಿದ್ದರೆ, ಇತ್ತ ರಿಲ್ಯಾಕ್ಸ್ ಮೂಡ್ ನಲ್ಲಿ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಮೈದಾನದಲ್ಲಿಯೇ ತಮ್ಮ ಬಾಂಗ್ರಾ ನೃತ್ಯದ ಝಲಕ್ ತೋರಿಸಿದರು. ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಧವನ್ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಭಾರತೀಯ ಅಭಿಮಾನಿಗಳ ಸಂಘ ಭಾರತ್ ಆರ್ಮಿ ಮಾಡುತ್ತಿದ್ದ ಬಾಂಗ್ರಾ ನೃತ್ಯಕ್ಕೆ ಜತೆಯಾದರು. ಈ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಪತಿ ವಿರಾಟ್ ಕೊಹ್ಲಿ ಬಗ್ಗೆ ಅನುಷ್ಕಾ ಶರ್ಮಾ ಎಂಥಾ ಮಾತು ಆಡಿದ್ರು ನೋಡಿ!

ಏಷ್ಯಾ ಕಪ್ ಕ್ರಿಕೆಟ್: ಇಂಡೋ-ಪಾಕ್ ಕದನಕ್ಕೆ ಮಹತ್ವದ ಬದಲಾವಣೆ ಮಾಡಿದ ಟೀಂ ಇಂಡಿಯಾ

ಅಮ್ಮನಿಗೆ ಹೇಳಿ ಬಂದಿದ್ದೀಯಾ?! ಹೀಗಂತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ರನ್ನು ಕೆಣಕಿದ ಪಾಕ್ ಬೌಲರ್ ಯಾರು ಗೊತ್ತಾ?

ಔಷಧಗಳನ್ನು ಸೇವಿಸುವಾಗ ಈ ಅಂಶಗಳನ್ನು ಯಾವಾಗಲೂ ನೆನಪಿನಲ್ಲಿರಲಿ

ಪ್ರಧಾನಿ ಮೋದಿಗೆ ಒಬ್ಬ ಹೈಕಮಾಂಡ್ ಇದ್ದಾರೆ! ಅವರು ಯಾರು ಗೊತ್ತಾ?

ಸಂಬಂಧಿಸಿದ ಸುದ್ದಿ

ಮೋದಿ ಅಲೆಯಿಲ್ಲ, ಕೇವಲ ಮೋದಿ ವಿಷವಿದೆ : ಜೈರಾಮ್ ರಮೇಶ್

ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

ಮುಂದಿನ ಸುದ್ದಿ