Select Your Language

Notifications

webdunia
webdunia
webdunia
webdunia

ಟ್ವಿಟರ್ ನಲ್ಲಿ ವಿರಾಟ್ ಕೊಹ್ಲಿಯನ್ನು ಅನ್ ಫಾಲೋ ಮಾಡಿದ ರೋಹಿತ್ ಶರ್ಮಾ!

ಟ್ವಿಟರ್ ನಲ್ಲಿ ವಿರಾಟ್ ಕೊಹ್ಲಿಯನ್ನು ಅನ್ ಫಾಲೋ ಮಾಡಿದ ರೋಹಿತ್ ಶರ್ಮಾ!
ಮುಂಬೈ , ಶುಕ್ರವಾರ, 7 ಸೆಪ್ಟಂಬರ್ 2018 (09:52 IST)
ಮುಂಬೈ: ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಗಾಸಿಪ್ ಗಳಿಗೆ ಪುಷ್ಠಿ ಸಿಕ್ಕಿದೆ.

ಇದೀಗ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ ನಿರಾಸೆಯಲ್ಲಿರುವ ರೋಹಿತ್ ಶರ್ಮಾ ತಮ್ಮ ಟ್ವಿಟರ್ ಖಾತೆಯಿಂದ ಕೊಹ್ಲಿಯನ್ನು ಅನ್ ಫಾಲೋ ಮಾಡಿದ್ದಾರೆ. ಟ್ವಿಟರ್ ಅಷ್ಟೇ ಅಲ್ಲದೆ, ಇನ್ ಸ್ಟಾಗ್ರಾಂನಲ್ಲೂ ಕೊಹ್ಲಿಯನ್ನು ರೋಹಿತ್ ಹೊರಗಿಟ್ಟಿದ್ದಾರೆ.

ಇದು ಈ ಇಬ್ಬರೂ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗೆ ಪುಕ್ಕ ನೀಡಿದೆ. ರೋಹಿತ್ ಶರ್ಮಾ ಉತ್ತಮ ಫಾರ್ಮ್ ನಲ್ಲಿದ್ದೂ ಟೆಸ್ಟ್ ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ಕೊಹ್ಲಿಯೇ ಕಾರಣ ಎಂದು ಇತ್ತೀಚೆಗೆ ರೋಹಿತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಗಾಗಿ ಬಿಸಿಸಿಐಗೇ ಪ್ರಶ್ನೆ ಮಾಡಿದ ಹರ್ಭಜನ್ ಸಿಂಗ್