Select Your Language

Notifications

webdunia
webdunia
webdunia
webdunia

ಚಿಕ್ಕಮಗಳೂರು: 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಚಿಕ್ಕಮಗಳೂರು: 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಚಿಕ್ಕಮಗಳೂರು , ಶನಿವಾರ, 31 ಮಾರ್ಚ್ 2018 (15:48 IST)
ಮೈ ರೋಮಾಂಚನಗೊಳ್ಳುವಂತೆ ಉರಗ ತಜ್ಞರೊಬ್ಬರು  15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹಿಡಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಮಡಬೂರಿನಲ್ಲಿ ನಡೆದಿದೆ. 
ಮಡಬೂರಿನ ಉದಯ್ ಪೂಜಾರಿ ಎಂಬುವರ ತೋಟದಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಕಂಡು ಭಯಬೀತರಾದ ಉದಯ್ ಪೂಜಾರಿ ಕುಟುಂಬಸ್ಥರು ಕೂಡಲೇ ಉರಗ ತಜ್ಞ ಹರೀಂದ್ರಗೆ ವಿಷಯ ತಿಳಿಸಿದ್ದಾರೆ. ತಕ್ಷಣ ತೋಟಕ್ಕೆ ಆಗಮಿಸಿದ ಉರಗ ತಜ್ಞ ತಮ್ಮ ಜೀವ ಭಯಬಿಟ್ಟು ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 
 
ಇನ್ನು ಕಳೆದ ಎರಡು ದಿನದ ಹಿಂದೆ ಕೂಡ ಕೊಪ್ಪ ತಾಲೂಕಿನ ಗಡಿಗೇರಶ್ವರ ಗ್ರಾಮದ ಪೈಪ್ ನಲ್ಲಿ ಸಿಲುಕಿದ್ದ ಕಾಳಿಂಗ ಸರ್ಪವನ್ನು ಕೂಡ ಉರಗ ತಜ್ಞ ಹರೀಂದ್ರ ರಕ್ಷಣೆ ಮಾಡಿದ್ರು. 
 
ಇನ್ನು ಕೊಪ್ಪ ತಾಲೂಕಿನ ಉತ್ತಮೇಶ್ವರ ಗ್ರಾಮದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ವೇಳೆಯಲ್ಲೂ ಕೂಡ ಉರಗ ತಜ್ಞರು ಕಾಳಿಂಗ ಸರ್ಪವನ್ನ ಸೆರೆ  ಹಿಡಿದಿದ್ರು. ಇನ್ನು ಸೆರೆ ಹಿಡಿದ ಮೂರು ಕಾಳಿಂಗ ಸರ್ಪಗಳನ್ನು ಉರಗ ತಜ್ಞ ಹರಿಂದ್ರರವರು ಕಾಡಿಗೆ ಬಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರಕಾರವಿದ್ದ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಳ: ಅಮಿತ್ ಶಾ