Select Your Language

Notifications

webdunia
webdunia
webdunia
webdunia

ಚೆಸ್ ವಿಶ್ವಕಪ್ ಫೈನಲ್: ಇತಿಹಾಸ ಸೃಷ್ಟಿಸಲು ಮುಂದಾದ ಭಾರತದ ಪ್ರಜ್ಞಾನಂದ

ಚೆಸ್ ವಿಶ್ವಕಪ್ ಫೈನಲ್: ಇತಿಹಾಸ ಸೃಷ್ಟಿಸಲು ಮುಂದಾದ ಭಾರತದ ಪ್ರಜ್ಞಾನಂದ
ನವದೆಹಲಿ , ಮಂಗಳವಾರ, 22 ಆಗಸ್ಟ್ 2023 (16:39 IST)
ನವದೆಹಲಿ: ಅಝರ್ ಬೈಜಾನ್ ನ ಬಾಕುವಿನಲ್ಲಿ ನಡೆಯುತ್ತಿರುವ ವಿಶ್ವಕ್ ಚೆಸ್ ಪಂದ್ಯಾವಳಿ ಫೈನಲ್ ಹಂತಕ್ಕೆ ಬಂದಿದ್ದು, ಇಂದು ರಾತ್ರಿ ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಇತಿಹಾಸ ಸೃಷ್ಟಿಸುವ ಭರವಸೆ ನೀಡಿದ್ದಾರೆ.

18 ವರ್ಷದ ಪ್ರಜ್ಞಾನಂದ ಇದೀಗ ಆರಂಭವಾಗಿರುವ ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ಸೆಣಸಾಡುತ್ತಿದ್ದಾರೆ. ವಿಶ್ವಕಪ್ ಚೆಸ್ ಪಂದ್ಯಾವಳಿಯ ಫೈನಲ್ ತಲುಪಿದ ಅತ್ಯಂತ ಕಿರಿಯ ಎಂಬ ಹಿರಿಮೆ ಪ್ರಜ್ಞಾನಂದನದ್ದು.

ಒಂದು ವೇಳೆ ಅವರು ಇಂದು ಗೆದ್ದರೆ ಅತೀ ಕಿರಿಯ ಚೆಸ್ ಪಟು ಎಂಬ ಇತಿಹಾಸ ಸೃಷ್ಟಿಸಲಿದ್ದಾರೆ. ಸೆಮಿಫೈನಲ್ ನಲ್ಲಿ ವಿಶ್ವ ನಂ.3 ಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾರನ್ನು ಪ್ರಜ್ಙಾನಂದ ಸೋಲಿಸಿದ್ದರು. ಪ್ರಜ್ಞಾನಂದಗೆ ಯಶಸ್ಸು ಸಿಗಲಿ ಎಂದು ಇಡೀ ಭಾರತ ಪ್ರಾರ್ಥಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂ.3 ವಿರಾಟ್ ಕೊಹ್ಲಿಗೇ ಫಿಕ್ಸ್: ರೋಹಿತ್ ಶರ್ಮಾ