Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್ ಗೆ ಇಂದಿನಿಂದ ಚಾಲನೆ: ಲೈವ್ ಎಲ್ಲಿ ವೀಕ್ಷಿಸಬೇಕು?

ಏಷ್ಯನ್ ಗೇಮ್ಸ್ ಗೆ ಇಂದಿನಿಂದ ಚಾಲನೆ: ಲೈವ್ ಎಲ್ಲಿ ವೀಕ್ಷಿಸಬೇಕು?
ಹ್ಯಾಂಗ್ ಝೂ , ಶನಿವಾರ, 23 ಸೆಪ್ಟಂಬರ್ 2023 (09:49 IST)
ಹ್ಯಾಂಗ್ ಝೂ: 19 ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಗೆ ಇಂದು ಚೀನಾದ ಹ್ಯಾಂಗ್ ಝೂನಲ್ಲಿ ಚಾಲನೆ ಸಿಗುತ್ತಿದೆ. ಭಾರತ ಈ ಬಾರಿ ಪದಕ ಪಟ್ಟಿಯಲ್ಲಿ ಸುಧಾರಿತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಇಂದು ಸಂಜೆ 4.30 ರಿಂದ ವರ್ಣರಂಜಿತ ಉದ್ಘಾಟನಾ ಸಮಾರಂಭ, ಪಥಸಂಚಲನ ನಡೆಯಲಿದೆ. ಭಾರತದ ಧ‍್ವಜಧಾರಿಗಳಾಗಿ ಈ ಬಾರಿ ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಮಹಿಳಾ ಬಾಕ್ಸಿಂಗ್ ತಾರೆ ಲೊವ್ಲಿನಾ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ ಇದುವರೆಗೆ ಕಳೆದ 18 ಏಷ್ಯನ್ ಗೇಮ್ಸ್ ಗಳಿಂದ 672 ಪದಕಗಳನ್ನು ಗೆದ್ದಿದೆ. ಈ ಬಾರಿ ಒಂದೇ ಗೇಮ್ಸ್ ನಲ್ಲಿ 100 ಪ್ಲಸ್ ಪದಕ ಗೆಲ್ಲುವ ಟಾರ್ಗೆಟ್ ಹೊಂದಿದೆ. ಈ ಬಾರಿ ಪುರುಷರ ಕ್ರಿಕೆಟ್ ತಂಡವೂ ಗೇಮ್ಸ್ ನ ಭಾಗವಾಗಿರುವುದು ವಿಶೇಷ. ಇಂದಿನಿಂದ ಅಕ್ಟೋಬರ್ 8 ರವರೆಗೆ ಏಷ್ಯನ್ ಗೇಮ್ಸ್ ನಡೆಯಲಿದೆ.  ಎಲ್ಲಾ ಪಂದ್ಯಗಳ ನೇರಪ್ರಸಾರ ಸೋನಿ ನೆಟ್ ವರ್ಕ್ ವಾಹಿನಿ ಅಥವಾ ಸೋನಿ ಲೈವ್ ಆಪ್ ನಲ್ಲಿ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಜೊತೆ ಬಣ್ಣ ಹಚ್ಚಿದ ಹಿಟ್ ಮ್ಯಾನ್: ರಿಲ್ಯಾಕ್ಸ್ ಮೂಡ್ ನಲ್ಲಿ ರೋಹಿತ್ ಶರ್ಮಾ