Select Your Language

Notifications

webdunia
webdunia
webdunia
webdunia

ಶ್ರೇಯಸ್ ಅಯ್ಯರ್ ದುರಾದೃಷ್ಟ! ಗಿಲ್-ಋತುರಾಜ್ ಗಾಯಕವಾಡ್ ಅರ್ಧಶತಕ

ಶ್ರೇಯಸ್ ಅಯ್ಯರ್ ದುರಾದೃಷ್ಟ! ಗಿಲ್-ಋತುರಾಜ್ ಗಾಯಕವಾಡ್ ಅರ್ಧಶತಕ
ಮೊಹಾಲಿ , ಶುಕ್ರವಾರ, 22 ಸೆಪ್ಟಂಬರ್ 2023 (20:23 IST)
Photo Courtesy: Twitter
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 32 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿದೆ.

ಆಸ್ಟ್ರೇಲಿಯಾ ನೀಡಿದ 277 ರನ್ ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭಿಕರಾದ ಶುಬ್ಮನ್ ಗಿಲ್, ಋತುರಾಜ್ ಗಾಯಕ್ ವಾಡ್ ಶತಕದ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿದರು. ಆದರೆ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿದ ಜೋಡಿ ಸ್ಪಿನ್ ದಾಳಿಗಿಳಿಯುತ್ತಿದ್ದಂತೇ ಬೇರ್ಪಟ್ಟಿತು. ಋತುರಾಜ್ 71 ರನ್ ಗಳಿಸಿ ಆಡಂ ಝಂಪಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ದುರಾದೃಷ್ಟವಶಾತ್ 3 ರನ್ ಗಳಿಸಿದ್ದಾಗ ರನ್ ಕದಿಯಲೆತ್ನಿಸಿ ರನೌಟ್ ಆದರು. ವಿಶ್ವಕಪ್ ಗೆ ಮುನ್ನ ಫಾರ್ಮ್ ಗೆ ಬರಲು ಹವಣಿಸುತ್ತಿರುವ ಅಯ್ಯರ್ ತೀವ್ರ ನಿರಾಸೆ ಅನುಭವಿಸಿದರು.

ಶ್ರೇಯಸ್ ಔಟಾದ ಬೆನ್ನಲ್ಲೇ 74 ರನ್ ಗಳಿಸಿದ್ದಾಗ ಗಿಲ್ ಕೂಡಾ ಝಂಪಾ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡಾಗ ಟೀಂ ಇಂಡಿಯಾ ಕೊಂಚ ಸಂಕಷ್ಟಕ್ಕೀಡಾಯಿತು. ಇದೀಗ ಕ್ರೀಸ್ ನಲ್ಲಿ 15 ರನ್ ಗಳಿಸಿರುವ ಕೆಎಲ್ ರಾಹುಲ್ ಮತ್ತು 18 ರನ್ ಗಳಿಸಿರುವ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಲೊಂಬೋದಿಂದ ಮೊಹಾಲಿಗೆ ಬಂದರೂ ಟೀಂ ಇಂಡಿಯಾ ಬೆಂಬಿಡದ ಮಳೆ!