Select Your Language

Notifications

webdunia
webdunia
webdunia
webdunia

ಡಾರ್ಕ್ ಸರ್ಕಲ್

ಡಾರ್ಕ್ ಸರ್ಕಲ್

ಅತಿಥಾ

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (19:30 IST)
ಸೂರ್ಯನ ಕಿರಣ, ಕೆಟ್ಟ ಆಹಾರ ಪದ್ದತಿ, ನಿದ್ರೆ ಕೊರತೆ, ಒತ್ತಡ ಕಣ್ಣಿನ ಕೆಳ ಭಾಗ ಕಪ್ಪಾಗಲು ಕಾರಣವಾಗುತ್ತದೆ. ಇದರಿಂದ ಮುಖ ವಯಸ್ಸಾದಂತೆ ಕಾಣಲು ಶುರುವಾಗುತ್ತದೆ. ಇಂತಹ ಸಮಸ್ಯೆಯಿಂದ ಹೊರ ಬರಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಂ ಅಥವಾ ಬ್ಯೂಟಿ ಪಾರ್ಲರ್‌ಗೆ ಮೊರೆ ಹೋಗುತ್ತೇವೆ. ನೈಸರ್ಗಿಕ ಸಾಧನಗಳನ್ನು ಬಳಸಿ ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
1. ರೋಸ್ ವಾಟರ್ : ಪ್ರತಿದಿನ ಕಣ್ಣಿನ ಕೆಳ ಭಾಗಕ್ಕೆ ಹತ್ತಿ ಸಹಾಯದಿಂದ ರೋಸ್ ವಾಟರನ್ನು ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಕಣ್ಣನ್ನು ಸ್ವಚ್ಛಗೊಳಿಸಿಕೊಳ್ಳಿ. ಇದ್ರಿಂದ ಕಣ್ಣು ಫ್ರೆಶ್ ಆಗಿ ಕಾಣುವ ಜೊತೆಗೆ ಕಣ್ಣಿನ ಕೆಳ ಭಾಗದಲ್ಲಿದ್ದ ಕಪ್ಪು ಕಲೆ ಕೂಡ ಕಡಿಮೆಯಾಗುತ್ತದೆ.
 
2. ಆಲೂಗೆಡ್ಡೆ ಅಥವಾ ಸೌತೆಕಾಯಿ : ಆಲೂಗೆಡ್ಡೆ ಅಥವಾ ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಕಣ್ಣುಗಳನ್ನು ಮುಚ್ಚಿ ಕಣ್ಣಿನ ಮೇಲೆ ಇಟ್ಟು 15 ನಿಮಿಷ ಬಿಟ್ಟು ಹದ ಬಿಸಿ ನೀರಿನಿಂದ ಮುಖತೊಳೆಯಬೇಕು. ಈ ರೀತಿ ಮಾಡುತ್ತಾ ಬಂದರೆ ಕಪ್ಪು ಕಲೆಗಳು ಮಾಯವಾಗುತ್ತದೆ.
 
3. ಲೋಳೆಸರ : ಪ್ರತಿದಿನ ಕಣ್ಣಿನ ಕೆಳಭಾಗಕ್ಕೆ ಹತ್ತಿ ಸಹಾಯದಿಂದ ಲೋಳೆಸರವನ್ನು ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಕಣ್ಣನ್ನು ಸ್ವಚ್ಛಗೊಳಿಸಿ.
 
4. ಟೊಮೆಟೊ : ನಿಂಬೆ ರಸದೊಂದಿಗೆ ಟೊಮೆಟೊ ರಸವನ್ನು ಮಿಶ್ರಣ ಮಾಡಿ ಮತ್ತು ಪ್ರತಿದಿನ ಕಣ್ಣಿನ ಕೆಳಭಾಗಕ್ಕೆ ಹತ್ತಿ ಸಹಾಯದಿಂದ ಇದನ್ನು ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಕಣ್ಣನ್ನು ಸ್ವಚ್ಛಗೊಳಿಸಿ.
 
5. ಜೇನುತುಪ್ಪ : ಕಣ್ಣಿನ ಕೆಳಭಾಗಕ್ಕೆ ಹಚ್ಚಿ, ನಯವಾಗಿ ಮಸಾಜ್ ಮಾಡಿ, 15-20 ನಿಮಿಷ ಬಿಟ್ಟು ಕಣ್ಣನ್ನು ಸ್ವಚ್ಛಗೊಳಿಸಿ.
 
6. ಟೀ ಪುಡಿ : ಟೀ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತ್ರ ಹತ್ತಿ ಸಹಾಯದಿಂದ ಕಣ್ಣಿನ ಕೆಳಭಾಗಕ್ಕೆ ಹಚ್ಚಿ 15-20 ನಿಮಿಷ ಬಿಡಿ. ಪ್ರತಿದಿನ ಹೀಗೆ ಮಾಡಿದ್ರೆ ಮೂರೇ ದಿನಗಳಲ್ಲಿ ಕಣ್ಣಿನ ಕೆಳ ಭಾಗದಲ್ಲಿರುವ ಕಪ್ಪು ಕಲೆ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚಿಲ್ಲಿ ಗಾರ್ಲಿಕ್ ಚಿಕನ್