Select Your Language

Notifications

webdunia
webdunia
webdunia
webdunia

ಅಧಿಕ ಪ್ರೋಟೀನ್ ಅಂಶವನ್ನು ಹೊಂದಿರುವ ಅಡೈ ದೋಸಾ...

ಅಧಿಕ ಪ್ರೋಟೀನ್ ಅಂಶವನ್ನು ಹೊಂದಿರುವ ಅಡೈ ದೋಸಾ...
ಬೆಂಗಳೂರು , ಮಂಗಳವಾರ, 9 ಅಕ್ಟೋಬರ್ 2018 (15:49 IST)
ಅಡೈ ದೋಸೆ ಎನ್ನುವುದು ತಮಿಳುನಾಡಿನಲ್ಲಿ ಪ್ರಸಿದ್ಧಿಯಲ್ಲಿರುವ ಒಂದು ರೀತಿಯ ದೋಸೆಯಾಗಿದೆ. ಸಾಮಾನ್ಯವಾಗಿ ಇದನ್ನು ಬೆಳಿಗ್ಗೆಯ ತಿಂಡಿಗೆ ಮಾಡುತ್ತಾರೆ. ಇದರಲ್ಲಿ ಹಲವು ಧಾನ್ಯಗಳನ್ನು ಬಳಸುವುದರಿಂದ ಇದು ಅತ್ಯಧಿಕ ಪ್ರೋಟೀನ್ ಹಾಗೂ ಕಬ್ಬಿಣಾಂಶಯುಕ್ತವಾಗಿದೆ. ಆದ್ದರಿಂದ ಆಗಾಗ ನೀವು ಬೆಳಗ್ಗಿನ ತಿಂಡಿಗೆ ಅಡೈ ದೋಸೆಯನ್ನು ಮಾಡುತ್ತಿರಬಹುದಾಗಿದೆ. ಇದನ್ನು ಮಾಡುವ ವಿಧಾನಕ್ಕಾಗಿ ಮುಂದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ - 11/2 ಕಪ್
ಕಡಲೆ ಬೇಳೆ - 1/4 ಕಪ್
ಉದ್ದಿನ ಬೇಳೆ - 1/4 ಕಪ್
ತೊಗರಿ ಬೇಳೆ - 1/4 ಕಪ್
ಕೆಂಪು ಮೆಣಸು - 8-10
ಈರುಳ್ಳಿ - 2
ಕರಿಬೇವು - ಸ್ವಲ್ಪ
ಅರಿಶಿಣ - ಚಿಟಿಕೆ
ಸಾಸಿವೆ - 1 ಚಮಚ
ಇಂಗು - 1/2 ಚಮಚ
ಶುಂಠಿ - 1-2 ಇಂಚು
ತುಪ್ಪ ಅಥವಾ ಎಣ್ಣೆ - ಸ್ವಲ್ಪ
 
ಮಾಡುವ ವಿಧಾನ:
ಅಕ್ಕಿ, ಉದ್ದಿನಬೇಳೆ, ತೊಗರಿಬೇಳೆ, ಕಡಲೆ ಬೇಳೆ ಮತ್ತು ಕೆಂಪು ಮೆಣಸನ್ನು 6-7 ಗಂಟೆ ನೆನೆಸಿಡಿ. ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ಪ್ಯಾನ್ ತೆಗೆದುಕೊಂಡು 2-3 ಚಮಚ ಎಣ್ಣೆಯನ್ನು ಹಾಕಿ. ಬಿಸಿಯಾದ ನಂತರ ಸಾಸಿವೆ, ಇಂಗು, ಕರಿಬೇವು, ಅರಿಶಿಣ ಮತ್ತು ಹೆಚ್ಚಿದ ಈರುಳ್ಳಿಯನ್ನು ಹಾಕಿ ಹುರಿಯಿರಿ. 2 ನಿಮಿಷ ಬಿಟ್ಟು ಅದಕ್ಕೆ ಹೆಚ್ಚಿದ ಶುಂಠಿಯನ್ನು ಸೇರಿಸಿ ಆ ಮಿಶ್ರಣವನ್ನು ಈಗಾಗಲೇ ರುಬ್ಬಿಟ್ಟ ಮಿಶ್ರಣಕ್ಕೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿದರೆ ದೋಸೆಯ ಹಿಟ್ಟು ರೆಡಿಯಾಗುತ್ತದೆ.
 
ಈಗ ತವಾವನ್ನು ಸ್ಟೌ ಮೇಲಿಟ್ಟು ಕಾದ ನಂತರ ದೋಸೆಯ ಹಿಟ್ಟನ್ನು ಹಾಕಿ ಹರಡಿ. ದೋಸೆಯ ಮೇಲೆ 1 ಚಮಚ ತುಪ್ಪವನ್ನು ಸವರಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿದರೆ ಪ್ರೋಟೀನ್ ಮತ್ತು ಕಬ್ಬಿಣಾಂಶ ಯುಕ್ತವಾದ ರುಚಿಯಾದ ಅಡೈ ದೋಸೆ ಸವಿಯಲು ಸಿದ್ಧವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಲಕ್ಕಿ ಪಾಯಸ