Select Your Language

Notifications

webdunia
webdunia
webdunia
webdunia

ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಿದರೆ ಉತ್ತಮ ಎಂಬುದು ತಿಳಿಬೇಕಾ?

ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಿದರೆ ಉತ್ತಮ ಎಂಬುದು ತಿಳಿಬೇಕಾ?
ಬೆಂಗಳೂರು , ಭಾನುವಾರ, 8 ಜುಲೈ 2018 (06:48 IST)
ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಒಂದಕ್ಕಿಂತ ಹೆಚ್ಚು ಮೊಟ್ಟೆ ತಿಂದರೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ ಎಂಬ ಭಯ ಹಲವರಲ್ಲಿರುತ್ತದೆ. ಆದರೆ ಇನ್ನು ಮುಂದೆ ಈ ರೀತಿ ಭಯ ಪಡುವ ಅಗತ್ಯವಿಲ್ಲ. ಯಾಕೆಂದರೆ ಇತ್ತೀಚಿನ ಅಧ್ಯಯನವೊಂದು ದಿನಕ್ಕೆರಡು ಮೊಟ್ಟೆಗಳನ್ನು ಸೇವಿಸುವ ಮೂಲಕ ಕೆಲವು ಪ್ರಯೋಜನಗಳಿವೆ ಎಂದು ತಿಳಿಸಿದೆ.


ಎರಡು ಮೊಟ್ಟೆಗಳಲ್ಲಿರುವ ಒಟ್ಟಾರೆ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ದೇಹಕ್ಕೆ ಹೆಚ್ಚಿನ ಚೈತನ್ಯ ಒದಗಿಸುತ್ತವೆ. ಎರಡು ದೊಡ್ಡ ಗಾತ್ರದ ಮೊಟ್ಟೆಗಳ ಸೇವನೆಯಿಂದ ದೇಹಕ್ಕೆ ಹದಿಮೂರು ಗ್ರಾಂ ಪ್ರೋಟೀನ್, 9.5 ಗ್ರಾಂ ಕೊಬ್ಬು, 56 ಮಿಲಿಗ್ರಾಂ ಕ್ಯಾಲ್ಸಿಯಂ ಹಾಗೂ 1.8 ಮಿಲಿಗ್ರಾಂ ನಷ್ಟು ಕಬ್ಬಿಣ ದೊರಕುತ್ತದೆ.


ಕೋಳಿಮೊಟ್ಟೆ ಮಾತ್ರವಲ್ಲ, ಹಂಸ ಹಾಗೂ ಬಾತುಕೋಳಿಗಳ ಮೊಟ್ಟೆಗಳಲ್ಲಿಯೂ ಪ್ರೋಟೀನ್ ಅಧಿಕ ಪ್ರಮಾಣದಲ್ಲಿದೆ ಹಾಗೂ ಇವು ಸಹಾ ಆರೋಗ್ಯಕರವಾಗಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಿನ ಉಪಹಾರ ಸೇವಿಸದೇ ಇರುವವರು ಶೀಘ್ರವೇ ಎಚ್ಚೆತ್ತುಕೊಳ್ಳಿ. ಯಾಕೆ ಗೊತ್ತಾ?