Select Your Language

Notifications

webdunia
webdunia
webdunia
webdunia

ನಟಿ ಕಾಜಲ್ ಅಗರ್ವಾಲ್ ಗೆ ಬಲವಂತವಾಗಿ ಕಿಸ್ ಮಾಡಿದ ಆ ಸಹನಟ ಯಾರು ಗೊತ್ತಾ?

ನಟಿ ಕಾಜಲ್ ಅಗರ್ವಾಲ್ ಗೆ ಬಲವಂತವಾಗಿ ಕಿಸ್ ಮಾಡಿದ ಆ ಸಹನಟ  ಯಾರು ಗೊತ್ತಾ?
ಹೈದರಾಬಾದ್ , ಶುಕ್ರವಾರ, 16 ನವೆಂಬರ್ 2018 (10:22 IST)
ಹೈದರಾಬಾದ್ : ‘ಕವಚಂ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಸಂದರ್ಭದಲ್ಲಿ ನಟಿ ಕಾಜಲ್ ಅಗರ್ವಾಲ್ ಅವರನ್ನು ಸಹನಟ ಬಲವಂತವಾಗಿ ಕಿಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಶ್ರೀನಿವಾಸ್ ಮಾಮಿಲ ನಿರ್ದೇಶಿಸಿರುವ ಬೆಲ್ಲಂಕೊಂಡ ಶ್ರೀನಿವಾಸ್ ಹಾಗೂ ಮೀಹಿರಿನ್ ಪಿರ್ಜಾದಾ ನಟಿಸಿರುವ ‘ಕವಚಂ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಮಂಗಳವಾರ ಹೈದರಾಬಾದ್‍ನಲ್ಲಿ ನಡೆದಿತ್ತು.


ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಕಾಜಲ್ ಅವರು ಮಾತನಾಡುವ ವೇಳೆ ನಿರ್ದೇಶಕ ಶ್ರೀನಿವಾಸ್ ಹಾಗೂ ಬೆಲ್ಲಂಕೊಂಡ ಶ್ರೀನಿವಾಸ್ ಹಾಗೂ ಮೀಹಿರಿನ್ ಪಿರ್ಜಾದಾ ಅವರಿಗೆ ಉದ್ದೇಶಿಸಿ ಧನ್ಯವಾದ ತಿಳಿಸಿದರು. ಇದೇ ವೇಳೆ ಕಾಜಲ್ ತಮ್ಮ ಸಹನಟ ಚೋಟಾ ಕೆ. ನಾಯ್ಡು ಬಗ್ಗೆ ಕೂಡ ಮಾತನಾಡಿದರು. ಆ ವೇಳೆ ಚೋಟಾ ನಾಯ್ಡು ಬಂದು ಕಾಜಲ್‍ಗೆ ಬಲವಂತವಾಗಿ ಕಿಸ್ ನೀಡಿದ್ದರು. ಆಗ ಕಾಜಲ್ ಒಂದು ಕ್ಷಣ ದಂಗಾಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆಯಲ್ಲಿ ಹೋಗುವ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಸೈಕೋ ಅರೆಸ್ಟ್