Select Your Language

Notifications

webdunia
webdunia
webdunia
webdunia

ಅಂಗಡಿ ಎತ್ತು ಎಂದು ಅಮಾಯಕ ವಡಾ ಪಾವ್ ಹುಡುಗಿಗೆ ಮುನ್ಸಿಪಾಲಿಟಿ ಜಬರ್ದಸ್ತು: ಯುವತಿ ಕಣ್ಣೀರು

Vada Pav girl

Krishnaveni K

ನವದೆಹಲಿ , ಶನಿವಾರ, 16 ಮಾರ್ಚ್ 2024 (11:24 IST)
Photo Courtesy: Twitter
ನವದೆಹಲಿ: ದೆಹಲಿಯಲ್ಲಿ ವಡಾ ಪಾವ್ ಸ್ಟಾಲ್ ಇಟ್ಟುಕೊಂಡು ಜೀವನ ಸಾಗಿಸುವ ಪದವೀಧರೆ ಯುವತಿಗೆ ದೆಹಲಿ ಮುನ್ಸಿಪಾಲಿಟಿ ಅಧಿಕಾರಿಗಳು ಅಂಗಡಿ ಎತ್ತು ಎಂದು ಜಬರ್ದಸ್ತ್ ಮಾಡಿದ್ದಕ್ಕೆ ಆಕೆ ಕಣ್ಣೀರು ಹಾಕಿದ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಂದ್ರಿಕಾ ಗೆರಾ ದೀಕ್ಷಿತ್ ಎಂಬಾಕೆ ಬೀದಿ ಬದಿ ವಡಾ ಪಾವ್ ಮಾರುತ್ತಿದ್ದ ವಿದ್ಯಾವಂತ ಯುವತಿ. ಈಕೆ ಈ ಮೊದಲು ಹಲ್ದೀರಾಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಬಳಿಕ ಆ ಕೆಲಸ ಬಿಟ್ಟು ತನ್ನದೇ ವಡಾ ಪಾವ್ ಸ್ಟಾಲ್ ಶುರು ಮಾಡಿದ್ದಳು. ಇದಕ್ಕೆ ಭಾರೀ ಪ್ರತಿಕ್ರಿಯೆಯೂ ಕಂಡುಬಂದಿತ್ತು.

ಆದರೆ ಇದೀಗ ಚಂದ್ರಿಕಾಗೆ ಮುನ್ಸಿಪಾಲಿಟಿ ಅಧಿಕಾರಿಗಳೇ ಅಂಗಡಿ ತೆರವುಗೊಳಿಸಲು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಡಾ ಪಾವ್ ಸ್ಟಾಲ್ ನಲ್ಲಿ ಗ್ರಾಹಕರಿಗೆ ಸರ್ವ್ ಮಾಡುತ್ತಿರುವಾಗ ಆಕೆ ಫೋನ್ ನಲ್ಲಿ ಮಾತನಾಡುತ್ತಾ ಅಳುತ್ತಾಳೆ. ಮುನ್ಸಿಪಾಲಿಟಿ ಅಧಿಕಾರಿಗಳು ತನಗೆ ಕೊಡುತ್ತಿರುವ ಕಿರುಕುಳದ ಬಗ್ಗೆ ತನ್ನ ಸಹೋದರನಿಗೆ ಫೋನ್ ಮಾಡಿ ಹೇಳುತ್ತಾಳೆ. ಚಂದ್ರಿಕಾ ಈ ರೀತಿ ತನ್ನ ಕಷ್ಟ ಹೇಳಿಕೊಂಡು ಅಳುವ ದೃಶ್ಯವನ್ನು ಅಲ್ಲೇ ಇದ್ದ ಗ್ರಾಹಕರು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದೀಗ ಭಾರೀ ವೈರಲ್ ಆಗಿದೆ.

ಮುನ್ಸಿಪಾಲಿಟಿ ಅಧಿಕಾರಿಗಳಿಗೆ ಇತ್ತೀಚೆಗಷ್ಟೇ 30 ರಿಂದ 35 ಸಾವಿರ ರೂ. ಕೊಡಲಾಗಿದೆ. ಹಾಗಿದ್ದರೂ ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆ ಹೇಳಿಕೊಳ್ಳುತ್ತಾಳೆ. ತಾವು ಕೇಳಿದಷ್ಟು ಹಣ ಕೊಡದೇ ಇದ್ದರೆ ಅಂಗಡಿ ಬಂದ್ ಮಾಡಬೇಕೆಂದು ಧಮ್ಕಿ ಹಾಕಿದ್ದಾರೆ ಎಂದು ಆಕೆ ಅಳಲು ತೋಡಿಕೊಂಡಿದ್ದಾಳೆ. ಆದರೆ ಇದಕ್ಕೆ ಕೆಲವರು ಋಣಾತ್ಮಕವಾಗಿಯೂ ಕಾಮೆಂಟ್ ಮಾಡಿದ್ದಾರೆ. ಒಂದು ವೇಳೆ ನೀನು ಅಂಗಡಿ ಹಾಕಲು ಪರವಾನಗಿ ಪಡೆದಿದ್ದರೆ ಯಾರಿಗೂ ಹೆದರಬೇಕಾಗಿಲ್ಲ ಎಂದು ಕೆಲವರು ಹೇಳಿದರೆ, ಅಳುವಾಗ ಆಕೆ ಮೈಕ್ರೋಫೋನ್ ಹಾಕಿಕೊಂಡಿದ್ದಾಳೆ. ಬಹುಶಃ ಸಿಂಪತಿ ಗಿಟ್ಟಿಸಿಕೊಳ್ಳುವುದಕ್ಕೆ ಈ ರೀತಿ ಮಾಡುತ್ತಿರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕನ್ನಡ ಟಿಕೆಟ್ ವಿಶ್ವೇಶ್ವರ ಕಾಗೇರಿಗಾ, ಅನಂತ್ ಕುಮಾರ್ ಹೆಗಡೆಗೆ ಕೊಡಬೇಕಾ