Select Your Language

Notifications

webdunia
webdunia
webdunia
webdunia

ಸೆಲ್ಫೀ ತೆಗೆದುಕೊಂಡ ಅಭಿಮಾನಿ ಮೇಲೆ ಸಿಟ್ಟಿಗೆದ್ದ ಸಲ್ಮಾನ್ ಖಾನ್

Salman Khan

Krishnaveni K

ಮುಂಬೈ , ಶುಕ್ರವಾರ, 8 ಮಾರ್ಚ್ 2024 (11:19 IST)
Photo Courtesy: Twitter
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಜೊತೆ ಸೆಲ್ಫೀ ತೆಗೆದುಕೊಳ್ಳಲು ಬಂದ ಅಭಿಮಾನಿಯ ಮೇಲೆ ಸಿಟ್ಟಿಗೆದ್ದ ಘಟನೆ ನಡೆದಿದೆ. ಘಟನೆ ಬಗ್ಗೆ ನೆಟ್ಟಿಗರಿಂದ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.

ಸೆಲೆಬ್ರಿಟಿಗಳು ಎಲ್ಲೇ ಹೋದರೂ ಅಭಿಮಾನಿಗಳು ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಮುತ್ತಿಗೆ ಹಾಕುವುದು ಸಾಮಾನ್ಯ. ಕೆಲವೊಮ್ಮೆ ಅಭಿಮಾನಿಗಳ ವರ್ತನೆ ಅತಿರೇಕಕ್ಕೆ ಹೋಗುವುದೂ ಇದೆ. ಇನ್ನು ಕೆಲವೊಮ್ಮೆ ಸೆಲೆಬ್ರಿಟಿಗಳೇ ಅತಿಯಾಗಿ ವರ್ತಿಸುವುದು ಇದೆ. ಇದೀಗ ಸಲ್ಮಾನ್ ಖಾನ್ ಸೆಲ್ಫೀ ತೆಗೆದುಕೊಳ‍್ಳಲು ಬಂದ ಅಭಿಮಾನಿ ಮೇಲೆ ತಿರುಗಿಬಿದ್ದಿದ್ದಾರೆ.

ನಡೆದುಕೊಂಡು ಹೋಗುತ್ತಿದ್ದಾಗ ಕೊಂಚ ದೂರದಲ್ಲೇ ಅಭಿಮಾನಿಯೊಬ್ಬ ಸೆಲ್ಫೀ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಮೂಡ್ ಚೆನ್ನಾಗಿರಲಿಲ್ಲವೇನೋ. ಅಭಿಮಾನಿ ಮೇಲೆ ಸಿಡಿಮಿಡಿಗೊಂಡಿದ್ದಾರೆ. ಸೆಲ್ಫೀ ತೆಗೆದುಕೊಳ‍್ಳುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.

ಈ ವಿಡಿಯೋ ನೋಡಿರುವ ನೆಟ್ಟಿಗರು ಅವರ ಮೇಲಿನ ಅಭಿಮಾನದಿಂದ ಜನ ಸೆಲ್ಫೀ ತೆಗೆದುಕೊಳ್ಳುತ್ತಾರೆ. ಅವರ ಪಾಡಿಗೆ ಅವರು ಫೋಟೋ ತೆಗೆದರೆ ಸಿಟ್ಟು ಮಾಡಿಕೊಳ್ಳುವುದೇಕೆ? ದೂರದಿಂದಲೇ ಸೆಲ್ಫೀ ತೆಗೆದುಕೊಳ್ಳುವುದೂ ತಪ್ಪಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karataka Damanaka review: ಹೇಗಿದೆ ಶಿವಣ್ಣ, ಪ್ರಭುದೇವ ನಾಯಕರಾಗಿರುವ ಕರಟಕ ದಮನಕ