Select Your Language

Notifications

webdunia
webdunia
webdunia
webdunia

Karataka Damanaka review: ಹೇಗಿದೆ ಶಿವಣ್ಣ, ಪ್ರಭುದೇವ ನಾಯಕರಾಗಿರುವ ಕರಟಕ ದಮನಕ

Karataka Damanaka

Krishnaveni K

ಬೆಂಗಳೂರು , ಶುಕ್ರವಾರ, 8 ಮಾರ್ಚ್ 2024 (11:07 IST)
Photo Courtesy: Twitter
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಜೊತೆಯಾಗಿ ನಟಿಸಿರುವ ಕರಟಕ ದಮನಕ ಸಿನಿಮಾ ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ಕಂಡುಬರುತ್ತಿದೆ.

ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ಎಂದರೆ ಕೇಳಬೇಕೇ? ಅದರಲ್ಲೂ ಗ್ರಾಮವೊಂದರ ಕತೆಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಇದೊಂದು ರೀತಿಯಲ್ಲಿ ನಮ್ಮ ಮಣ್ಣಿನ ಸಿನಿಮಾ ಎಂದರೂ ತಪ್ಪಾಗಲಾರದು. ಊರೊಂದಕ್ಕೆ ಬರುವ ಇಬ್ಬರು ಸ್ನೇಹಿತರ ಕತೆ ಸಿನಿಮಾದಲ್ಲಿದೆ. ಸಿನಿಮಾದುದ್ದಕ್ಕೂ ಯೋಗರಾಜ್ ಭಟ್ ಶೈಲಿಯ ಸಂಭಾಷಣೆ ನಿಮಗೆ ಕಚಗುಳಿಯಿಡಿಸುತ್ತದೆ.

ಭರಪೂರ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನೂ ನೀಡುವ ಸಿನಿಮಾ ಇದಾಗಿದೆ. ಒಳ್ಳೆಯ ಹಾಡಿನ ಜೊತೆಗೆ ಶಿವಣ್ಣ-ಪ್ರಭುದೇವ ಮಸ್ತ್ ಡ್ಯಾನ್ಸ್ ಇದೆ. ಮನತಣಿಸಲು ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ಇದ್ದಾರೆ. ವಿ. ಹರಿಕೃಷ್ಣ ಹಿನ್ನಲೆ ಸಂಗೀತವೂ ಮುದವಾಗಿದೆ.

ವೀಕೆಂಡ್ ನಲ್ಲಿ ಫ್ಯಾಮಿಲಿ ಸಮೇತ ನೋಡಬಹುದಾದ ಸಿನಿಮಾ ಇದಾಗಿದೆ. ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ ಪ್ರೇಕ್ಷಕರು ಇದು ಕನ್ನಡಕ್ಕೆ ಮತ್ತೊಂದು ಬ್ಲಾಕ್ ಬ್ಲಸ್ಟರ್ ಸಿನಿಮಾವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಜೊತೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನೂ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಾಯಣ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಗೆ ಸಂಭಾವನೆ!