Select Your Language

Notifications

webdunia
webdunia
webdunia
webdunia

ಅತ್ಯಾಚಾರವೆಸಗಿದ ವಿಡಿಯೋ ತೋರಿಸಿ ಬಾಲಕಿಯ ಮೇಲೆ ಮತ್ತೆ 4 ವರ್ಷಗಳ ಕಾಲ ಅತ್ಯಾಚಾರ ಎಸಗಿದ ಕಾಮುಕರು

ಅತ್ಯಾಚಾರವೆಸಗಿದ ವಿಡಿಯೋ ತೋರಿಸಿ ಬಾಲಕಿಯ ಮೇಲೆ ಮತ್ತೆ 4 ವರ್ಷಗಳ ಕಾಲ ಅತ್ಯಾಚಾರ ಎಸಗಿದ ಕಾಮುಕರು
ಹೈದರಾಬಾದ್ , ಮಂಗಳವಾರ, 15 ಜನವರಿ 2019 (09:58 IST)
ಹೈದರಾಬಾದ್ : 16 ವರ್ಷದ ಬಾಲಕಿಯ ಮೇಲೆ  ಅತ್ಯಾಚಾರವೆಸಗಿದ ಸಂಬಂಧಿಯೊಬ್ಬ ಅದನ್ನು ವಿಡಿಯೋ ಮಾಡಿ ಬೆದರಿಸಿ ತನ್ನ ಸ್ನೇಹಿತರ ಜೊತೆ ಸೇರಿ ಮತ್ತೆ 4 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.


4 ವರ್ಷಗಳ ಹಿಂದೆ ಬಾಲಕಿಯ ಸಂಬಂಧಿಯೊಬ್ಬ ಅವರ ಮನೆಯ ಮೇಲಿನ ಮಹಡಿಗೆ ಆಕೆಯನ್ನು ಕರೆದೊಯ್ದು ಕುಡಿಯುವ ಜ್ಯೂಸ್‍ನಲ್ಲಿ ಮತ್ತು ಬರುವ ಔಷಧ ಬೆರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಅದನ್ನ ವಿಡಿಯೋ ಮಾಡಿಕೊಂಡಿದ್ದನು. ಅಲ್ಲದೆ ಆ ವಿಡಿಯೋ ಇಟ್ಟುಕೊಂಡು ಆರೋಪಿ ಹಾಗೂ ಆತನ ಸ್ನೇಹಿತರು ಮತ್ತೆ ಆಕೆಯ ಮೇಲೆ 4 ವರ್ಷಗಳ ಕಾಲ ನಿರಂತರವಾಗಿ  ಅತ್ಯಾಚಾರ ಎಸಗಿದ್ದಾರೆ.


ಅವರ ಕಿರುಕುಳ ತಾಳಲಾರದೆ ಸಂತ್ರಸ್ತೆ ಹೈದರಾಬಾದ್‍ ನ ಭರೋಸಾ ಕೇಂದ್ರಕ್ಕೆ ತೆರಳಿ ನಡೆದ ಘಟನೆ ಕುರಿತು ತಿಳಿಸಿದ್ದಾಳೆ. ಬಾಲಕಿಯ ದೂರಿನ ಮೇಲೆ ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಬಾಲಕಿಯ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಪ್ರತಿಭಟನೆ ಮಾಡಿ ಇದರಲ್ಲಿ ಶಾಮೀಲಾದ ಉಳಿದ 8 ಮಂದಿಯನ್ನು ಕೂಡ ಬಂಧಿಸಬೇಕು. ಇಂತವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಥಿಯೇಟರ್ ನಲ್ಲಿ ರಾಸಲೀಲೆಯಲ್ಲಿ ತೊಡಗಿದ ಡಾಕ್ಟರ್ ಮತ್ತು ನರ್ಸ್ ಅಮಾನತು