Select Your Language

Notifications

webdunia
webdunia
webdunia
webdunia

ದೀಪಾವಳಿಗೆ ಪಟಾಕಿ ಹೊಡೀಬೇಕಾ? ಬೇಡ್ವಾ? ಇಂದು ಸುಪ್ರೀಂಕೋರ್ಟ್ ತೀರ್ಪು

ದೀಪಾವಳಿಗೆ ಪಟಾಕಿ ಹೊಡೀಬೇಕಾ? ಬೇಡ್ವಾ? ಇಂದು ಸುಪ್ರೀಂಕೋರ್ಟ್ ತೀರ್ಪು
ನವದೆಹಲಿ , ಮಂಗಳವಾರ, 23 ಅಕ್ಟೋಬರ್ 2018 (10:06 IST)
ನವದೆಹಲಿ: ದೀಪಾವಳಿ ದಿನ ಪಟಾಕಿ ಹೊಡೆದು ಸಂಭ್ರಮಿಸೋಣವೆಂದು ಲೆಕ್ಕಾಚಾರ ಹಾಕಿದ್ದರೆ ಸ್ವಲ್ಪ ತಾಳಿ. ಈ ಬಗ್ಗೆ ಇಂದು ಸುಪ್ರೀಂಕೋರ್ಟ್ ನಿರ್ಧಾರ ಕೈಗೊಳ್ಳಲಿದೆ.

ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಇಂದು ಪಟಾಕಿಗೆ ನಿಷೇಧ ಹೇರಬೇಕೋ ಬೇಡವೋ ಎಂದು ತೀರ್ಪು ನೀಡಲಿದೆ.

ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಈಗಾಗಲೇ ಈ ಬಗ್ಗೆ ಸಲ್ಲಿಸಲಾದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದೆ. ಅದರ ತೀರ್ಪು ಇಂದು ಹೊರಬೀಳಲಿದ್ದು, ದೇಶದ ಹಲವು ಪಟಾಕಿ ತಯಾರಿಕಾ ಕಂಪನಿಗಳ ಮೇಲೆ ಇದು ಭಾರೀ ಪರಿಣಾಮ ಬೀರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಜಾಗದ ವಿಚಾರಕ್ಕೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಗುಪ್ತಾಂಗ ರಾಡ್ ತುರುಕಿದ ಕಾಮುಕ